ಚಿಕ್ಕಬಳ್ಳಾಪುರ: ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರಿಗೆ ಸಿಹಿ ಸುದ್ದಿ. ಇಂದಿನಿಂದ(ಡಿಸೆಂಬರ್ 1) ನಂದಿ ಗಿರಿಧಾಮ ವೀಕ್ಷಿಸಲು ಅನುಮತಿಸಲಾಗಿದೆ.
ವಾರಾಂತ್ಯದ ಶನಿವಾರ ಭಾನುವಾರ ಹೊರತಾಗಿ ಉಳಿದ ದಿನ ಪ್ರವಾಸಿಗರು ಗಿರಿಧಾಮದ ಅಂದ ಸವಿಯಬಹುದಾಗಿದೆ. ಬೆಟ್ಟದಲ್ಲಿ ಮುಂಗಡ ಹೋಟೆಲ್ ಕೋಣೆ ಬುಕ್ ಮಾಡಿದವರಿಗೆ ಶನಿವಾರ, ರವಿವಾರ ಹಿಲ್ಸ್ ನೋಡಲು ಅವಕಾಶ ಇರುತ್ತದೆ. ಈ ಕುರಿತು ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಅವರು, ರಸ್ತೆ ಕೊಚ್ಚಿ ಹೋಗಿ ಬಂದ್ ಆಗಿದ್ದ ನಂದಿಗಿರಿಧಾಮ ಪ್ರವೇಶಕ್ಕೆ ಇದೀಗ ಅವಕಾಶ ಸಿಕ್ಕಿದೆ. ಇಂದಿನಿಂದ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
PublicNext
01/12/2021 07:38 am