ಕಲಬುರಗಿ : ಪದೇ ಪದೇ ಭೂಕಂಪವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಕ್ಕೆ ಎನ್ ಜಿ ಆರ್ ಐ ತಂಡ ಭೇಟಿ ವೇಳೆ ಮತ್ತೆ ಭೂ ಕಂಪನವಾಗಿದೆ.
ಹೈದ್ರಾಬಾದ್ ನ ರಾಷ್ಟ್ರೀಯ ಭೌಗೋಳಿಕ ಸಂಸ್ಥೆಯ ವಿಜ್ಞಾನಿಗಳ ತಂಡ ಇಂದು ಗ್ರಾಮಕ್ಕೆ ಭೇಟಿ ನೀಡಿ ಸಿಸ್ಮಾ ಮೀಟರ್ ಅಳವಡಿಸಿದ 10 ನಿಮಿಷದಲ್ಲೇ ಭೂ ಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 0.5 ರಷ್ಟು ತೀವ್ರತೆ ದಾಖಲಾಗಿದೆ.
ಇನ್ನು ಪದೇ ಪದೇ ಕಂಪನವಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
PublicNext
17/10/2021 03:45 pm