ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮನೆ ಜಲಾವೃತಗೊಂಡಿದ್ದಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಇಟ್ಟಿಕೇರೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗುತ್ತಿದ್ದರಿಂದ ಮಹಿಳೆಯ ಒಬ್ಬಳು ಮನನೊಂದು ನಾನು ಸಾಯಿಯುತ್ತೇನೆ ಎಂದು ಇಟ್ಟಿಕೇರೆಯಲ್ಲಿ ಇಳಿದ ಘಟನೆ ಜರುಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಮ್ಮ ಮನೆಗೆ ಮಳೆಯ ನೀರು ನುಗ್ಗಿ ಮನೆನೇ ಜಲಾವೃತವಾಗಿದೆ ನಮಗೆ ಊಟ ಇಲ್ಲ ನೀರು ಇಲ್ಲ ಇರಲು ಜಾಗೆ ಇಲ್ಲ ಎಂದು ಬೆಳಂಬೆಳ್ಳಗೆ ಇಟ್ಟಿಕೇರೆಯಲ್ಲಿ ಇಳಿದು ಸಾಯಲು ಮುಂದಾದಾಗ ಸ್ಥಳೀಯರು ಅವಳನ್ನ ರಕ್ಷಣೆ ಮಾಡಿದ್ದಾರೆ.

ಮಳೆಯಿಂದ ಇಟ್ಟಿಕೇರೆಯ ತುಂಬಿ ಕೋಡಿ ಬಿದ್ದಿದೆ ಇನ್ನೂ ಇಟ್ಟಿಕೇರೆಯ ನೀರು ಶ್ರೀಸಾಯಿಬಾಬಾ ಮಂದಿರ ಜಲಾವೃತವಾಗಿದೆ ಹಾಗೂ ಮನೆಗಳಲ್ಲಿ ಇಟ್ಟಿಕೇರೆಯ ನೀರು ನುಗ್ಗಿ ದವಸ ಧ್ಯಾನಗಳು ಹಾಳಾಗಿ ಹೋಗಿದೆ. ಇನ್ನೂ ಅನಾಹುತ ಆಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತಕೊಳ್ಳಬೇಕಾಗಿದೆ.

Edited By :
PublicNext

PublicNext

06/09/2022 01:15 pm

Cinque Terre

56.49 K

Cinque Terre

1

ಸಂಬಂಧಿತ ಸುದ್ದಿ