ವರದಿ - ಗೀತಾಂಜಲಿ
ಮಂಡ್ಯ: ಮಂಡ್ಯದ ಉತ್ತರ ಬೃಂದಾವನದ ದೋಣಿ ವಿಹಾರ ಕೇಂದ್ರ ಮುಳುಗಡೆಯಾಗಿದೆ . ಹೀಗಾಗಿ ಬೋಟಿಂಗ್ ಹಾಗೂ ಸಂಗೀತ ಕಾರಂಜಿ ಸ್ಥಗಿತಗೊಂಡಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನ ಕನ್ನಂಬಾಡಿ ಅಣೆಕಟ್ಟೆಯಿಂದ 78,000 ನೀರು ಬಿಡುಗಡೆ ಮಾಡುತ್ತೆ.ಈ ನದಿ ನೀರು ಉತ್ತರ ಬೃಂದಾವನಕ್ಕೆ ನುಗ್ಗಿದೆ.
ಇನ್ನು ಬೋಟಿಂಗ್, ಸಂಗೀತ ಕಾರಂಜಿ ಸ್ಥಗಿತದಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ.ವೀಕೆಂಡ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೃಂದಾವನಕ್ಕೆ ಪ್ರವಾಸಿಗರು ಬರುತ್ತಿದ್ದರು. ನಿತ್ಯ ಏಳು ಗಂಟೆಗೆ ನಡೆಯುತ್ತಿದ್ದ ಸಂಗೀತ ಕಾರಂಜಿ ನೋಡಿ ಮರಳುತ್ತಿದ್ದರು. ಆದ್ರೆ ಇದೀಗ ದಕ್ಷಿಣ ಬೃಂದಾವನ ಮಾತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ 40 ಸಾವಿರ ಕ್ಯೂಸೆಕ್ ಗಿಂತ ಕಡಿಮೆಯಾದ್ರೆ ಮಾತ್ರ ಬೋಟಿಂಗ್, ಸಂಗೀತ ಕಾರಂಜಿ ಮತ್ತೆ ಆರಂಭವಾಗಲಿದೆ ಎನ್ನುವ ಮಾಹಿತಿ ಇದೆ.
PublicNext
06/08/2022 03:57 pm