ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಮೆಟ್ರೋ ಬಳಕೆಯಿಂದ ಸಿಲಿಕಾನ್ ಸಿಟಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ

ಬೆಂಗಳೂರು: ನಮ್ಮ ಮೆಟ್ರೋ ಯೋಜನೆ ಪರಿಣಾಮವಾಗಿ ರಾಜ್ಯ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈ ಬಗ್ಗೆ 2017 ಮತ್ತು 2021 ರ ನಡುವಿನ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗವು ನಡೆಸಿದ ಅಧ್ಯಯನದ ಪ್ರಕಾರ ಈ ಖುಷಿಯ ವಿಚಾರ ತಿಳಿದು ಬಂದಿದೆ. ಬೆಂಗಳೂರು ಮೆಟ್ರೋ (BMRCL) ಎರಡನೇ ಹಂತದ ಆರು ಸ್ಥಳಗಳಲ್ಲಿ ಈ ಅಧ್ಯಯನ ನಡೆದಿದ್ದು ಗಾಳಿಯ ಗುಣಮಟ್ಟ ಹೆಚ್ಚಳ ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮೆಟ್ರೋ ಸಹಕಾರಿ ಆಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಮತ್ತು ಪ್ರಧಾನ ತನಿಖಾಧಿಕಾರಿ ಡಾ. ನಂದಿನಿ ಎನ್ ಅವರ ಮಾರ್ಗದರ್ಶನದಲ್ಲಿ ಈ ಅಧ್ಯಯನ ನಡೆದಿತ್ತು. ಪುಟ್ಟೇನಹಳ್ಳಿ ಕ್ರಾಸ್‌ನಿಂದ ಅಂಜನಾಪುರ ಟೌನ್‌ಶಿಪ್, ಗೊಟ್ಟಿಗೆರೆಯಿಂದ ನಾಗವಾರ, ಮೈಸೂರು ರಸ್ತೆ ಟರ್ಮಿನಲ್‌ನಿಂದ ಕೆಂಗೇರಿ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ, ಕೃಷ್ಣರಾಜಪುರಂ ಬೈಪನಹಳ್ಳಿಯಿಂದ ವೈಟ್‌ಫೀಲ್ಡ್ ಮತ್ತು ಹೆಸರಘಟ್ಟ ಕ್ರಾಸ್‌ನಿಂದ ಬಿಐಇಸಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸ್ಯಾಂಪಲ್‌ಗಳನ್ನು ಅಳೆಯಲಾಗಿತ್ತು.

ಕೈಗಾರಿಕಾ, ವಸತಿ, ಗ್ರಾಮೀಣ ಮತ್ತು ಇತರ ಪ್ರದೇಶಗಳಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸೂಚಿಸಿರುವ 60µg/m3 ಮಿತಿಯೊಳಗೆ ಅಧ್ಯಯನ ನಡೆಸಿರುವ ಕಡೆಗಳಲ್ಲಿ ಗಾಳಿಯ ಗುಣಮಟ್ಟ ದಾಖಲಾಗಿದೆ ಎಂದು ಅಧ್ಯಯನ ಫಲಿತಾಂಶಗಳು ಸೂಚಿಸಿವೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ PM 2.5 ಸಾಂದ್ರತೆಯು ನಿರಂತರವಾಗಿ 2017-2020 ರಿಂದ ಮಿತಿಯಲ್ಲಿದ್ದರೆ, ಇದು 2021 ರಲ್ಲಿ ಸ್ವಲ್ಪಮಟ್ಟಿಗೆ ಮೀರಿದೆ ಏಕೆಂದರೆ ಇದು ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಒಂದಾಗಿದೆ ಎಂದು ಅಧ್ಯಯನವು ತಿಳಿಸಿದೆ.

Edited By : Nagaraj Tulugeri
PublicNext

PublicNext

28/02/2022 07:31 am

Cinque Terre

33.73 K

Cinque Terre

0

ಸಂಬಂಧಿತ ಸುದ್ದಿ