ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾದಾಮಿ : ಬನ್ನಿ ಬಾದಾಮಿ ಮನೋರಥ ಪ್ರತಿಷ್ಠಾನದ ಗೋಸಂರಕ್ಷಣೆಗೆ ಕೈಜೋಡಿಸಿ

ಬಾದಾಮಿ : ವೃದ್ಧ ತಂದೆ ತಾಯಂದಿರನ್ನೇ ಮಕ್ಕಳು ಇಂದು ಅನಾಥಾಶ್ರಮ, ವೃದ್ಧಾಶ್ರಮಕ್ಕೆ ತಳ್ಳುತ್ತಿರುವಾಗ, ಬರಡು ಹಾಗೂ ಅಸ್ವಸ್ಥ ಗೋವುಗಳಿಗೆ ರಕ್ಷಣೆ ನೀಡುವುದೆಂದರೆ ಸಾಮಾನ್ಯದ ಮಾತಲ್ಲ.

ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಕೃಪಾಶೀರ್ವಾದದಿಂದ ಆರಂಭವಾದ " ಮನೋರಥ ಪ್ರತಿಷ್ಠಾನ'' ಎಂಬ ಸಂಸ್ಥೆಯು, ದಾನಿಗಳು, ಗೋ ಪ್ರೇಮಿಗಳ ಸಹಕಾರದೊಂದಿಗೆ ಬಾಗಲಕೋಟೆ ಜಿಲ್ಲೆಯ ಬನಶಂಕರಿ ಶ್ರೀ ಕ್ಷೇತ್ರದ ಬಾದಾಮಿಯಲ್ಲಿ ಕಳೆದ ಮೂರು ವರ್ಷಗಳಿಂದ ಸುಮಾರು 75 ಹಸುಗಳ ಪಾಲನೆ ಪೋಷಣೆ ಮಾಡುತ್ತಿದೆ.

ಮೂಲತಃ ಬಾದಾಮಿಯವರೇ ಆದ ಪಂ. ಸಮೀರಾಚಾರ್ಯ ಹಾಗೂ ಸಂಜೀವಾಚಾರ್ಯ ದೇಶಪಾಂಡೆ ಅವರ ಉಸ್ತುವಾರಿಯಲ್ಲಿ 'ಮನೋರಥ ಪ್ರತಿಷ್ಠಾನದ ಗೋಶಾಲೆ ಮುನ್ನಡೆದಿದೆ. ಕಟುಕರ ಕೈಯಿಂದ ರಕ್ಷಿಸಿ ಗೋ ಸಂತಾನ ಉಳಿಸುವುದೇ ಪ್ರತಿಷ್ಠಾನದ ಉದ್ದೇಶವಾಗಿದೆ.

ಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ನೀಡಿದ 10 ಆಕಳುಗಳಿಂದ 5 ಎಕರೆ ಬಾಡಿಗೆ ಭೂಮಿಯಲ್ಲಿ ಆರಂಭವಾದ ಗೋಶಾಲೆಯಲ್ಲಿ ಇಂದು ವಯಸ್ಸಾದ,ಪರಿತ್ಯಕ್ತ, ಊನಗೊಂಡ,ಅನಾಥ ಭಾರತೀಯ ತಳಿಯ ಹಸುಗಳು ಆಶ್ರಯ ಪಡೆದಿವೆ.

ಒಂದು ಹಸುವಿನ ನಿರ್ವಹಣೆ ಎಷ್ಟು ಕಷ್ಟಸಾಧ್ಯ ಎಂಬುದು ಎಲ್ಲರಿಗೂ ಗೊತ್ತು. ಈ ಮಹತ್ಕಾರ್ಯಕ್ಕೆ ನಿತ್ಯ ಖರ್ಚು-ವೆಚ್ಚಗಳ ದೊಡ್ಡ ಪಟ್ಟಿಯೇ ಇದೆ.ಎಲ್ಲ ಕಾಮಧೇನುಗಳಿಗೆ ಮೇವು, ಔಷಧೋಪಚಾರ, ನಿರ್ವಹಣೆ ಹಾಗೂ ದುಡಿಯುವ ವರ್ಗಕ್ಕೆ ವೇತನ.. ಇತ್ಯಾದಿ...,ಇತ್ಯಾದಿ.

ಪ್ರಾರಂಭದ ದಿನಗಳಿಂದಲೂ ಧರ್ಮಬೀರುಗಳ ದಾನ-ಧರ್ಮಗಳಿಂದಲೇ ಮುನ್ನಡೆಯುತ್ತಿರುವ ಈ ಗೋಶಾಲೆಗೀಗ ಹೆಚ್ಚಿನ ಧನ ಸಹಾಯ-ಸಹಕಾರದ ಅವಶ್ಯಕತೆಯಿದೆ.

ವರ್ಷವೊಂದಕ್ಕೆ ಸುಮಾರು 60 ಟ್ರಾಕ್ಟರ್ ಮೇವು ಬೇಕಾಗಲಿದ್ದು, 'ಮೇವು ಸಂಗ್ರಹ ಅಭಿಯಾನ' ವನ್ನು ಪ್ರತಿಷ್ಠಾನ ಕೈಗೆತ್ತಿಕೊಂಡಿದೆ.ಮೇವನ್ನು ತಂದು ನೇರವಾಗಿ ಗೋಶಾಲೆಗೆ ಒಪ್ಪಿಸಲೂ ಬಹುದು.ಪರ್ಯಾಯವಾಗಿ ಪ್ರತಿ ಟ್ರಾಕ್ಟರ್ ಮೇವಿಗೆ ಸಾರಿಗೆ ಹಾಗೂ ಇತರೇ ವೆಚ್ಚ ಸೇರಿ ಅಂದಾಜು 8000/- ರೂಪಾಯಿ ತಗಲುತ್ತದೆ. ಯಾವುದೇ ರೂಪದಲ್ಲಾದರೂ ಸಹಾಯ ಮಾಡಬಹುದೆಂದು ಪ್ರತಿಷ್ಠಾನ ರೂವಾರಿಯಾದ ಸಂಜೀವಾಚಾರ್ಯ ದೇಶಪಾಂಡೆ ವಿನಂತಿಸಿದ್ದಾರೆ.

ಜೊತೆಗೆ ತಮ್ಮ ಕುಟುಂಬದವರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂಥ ವಿಶೇಷ ಸಂದರ್ಭಗಳನ್ನು ಗೋಶಾಲೆಗೆ ಭೇಟಿ ಕೊಟ್ಟು ಗೋಗ್ರಾಸ ನೀಡಿ ಭಾರತೀಯ ಸಂಪ್ರದಾಯದಂತೆ ಆಚರಿಸಿಕೊಳ್ಳುವ ಸೌಲಭ್ಯವೂ ಇದೆ. ಅಲ್ಲಿಗೆ ಬರುವ ಗೋಪ್ರೇಮಿ ಕುಟುಂಬಗಳಿಗೆ ಊಟ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ಇನ್ನಷ್ಟು ಹೆಚ್ಚಲಿರುವ ಗೋಸಂಖ್ಯೆಗಳಿಗೆ ಅನುಗುಣವಾಗಿ ಹೆಚ್ಚಿನ(ಸ್ವಂತ) ಸ್ಥಳಾವಕಾಶ, (ಸುಮಾರು 10 ಎಕರೆ) ಸಾಕಷ್ಟು ಆರ್ಥಿಕ ಅನುದಾನ ಸಿಕ್ಕರೆ ಮತ್ತಷ್ಟು ಮಮತೆ, ಕಾಳಜಿಯಿಂದ ಈ ಗೋಸಂರಕ್ಷಣಾ ಯಜ್ಞವನ್ನು ನಿರಂತರವಾಗಿ ನಿರಾತಂಕವಾಗಿ ನಿಭಾಯಿಬಹುದು ಎಂಬುದು ಅವರ ಆಶಯ.

ಮನೋರಥ ಪ್ರತಿಷ್ಠಾನದ ಕನಸು-ಕಳಕಳಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾದದ್ದು ಸರಕಾರ,ಸಮಾಜ, ಸಂಘ-ಸಂಸ್ಥೆಗಳ ಆದ್ಯ ಕರ್ತವ್ಯವಲ್ಲವೇ? ಸಾರ್ವಜನಿಕರ ಸಂಪಾದನೆಯಲ್ಲಿ ಸ್ವಲ್ಪ ಸಮಾಜ ಸೇವೆಗೆ ಸಂದರೆ ಸಾರ್ಥಕವಾಗಬಲ್ಲುದಲ್ಲವೇ ಈ ಬದುಕು. ಆನ್ ಲೈನ್ ಪೇಮೆಂಟ್ ಗಾಗಿ 91647 18493 ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಜೀವಾಚಾರ್ಯ ದೇಶಪಾಂಡೆ 91649 35642 ಸಂಪರ್ಕಿಸಬಹುದು.

ಶ್ರೀ ಮನೋರಥ ಪ್ರತಿಷ್ಠಾನ,

ಕರ್ನಾಟಕ ಬ್ಯಾಂಕ, ಬಾದಾಮಿ ಶಾಖೆ, ಎಸ್.ಬಿ.A/c No.

9312500100928201

IFSC No.KARB0000931

ಈ ಎಲ್ಲ ದೇಣಿಗೆಗಳಿಗೆ ಸೆಕ್ಶನ್ 80G ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯಿದೆ

ವರದಿ : ನಾರಾಯಣ ಭಾದ್ರಿ, ಹುಬ್ಬಳ್ಳಿ

Edited By :
PublicNext

PublicNext

12/06/2022 01:52 pm

Cinque Terre

73.75 K

Cinque Terre

2

ಸಂಬಂಧಿತ ಸುದ್ದಿ