ಕೊರಟಗೆರೆ: ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊರಟಗೆರೆ ತಾಲೂಕಿನ ಗೊರವನಹಳ್ಳಿ, ತೀತಾ ಮಧ್ಯದ ರಸ್ತೆಯಲ್ಲಿನ ಸೇತುವೆ ಕುಸಿದುಬಿದ್ದು ಸಂಪೂರ್ಣ ರಸ್ತೆ ಸಂಚಾರ ಬಂದ್ ಆಗಿದೆ.
ಸೇತುವೆ ನಿರ್ಮಾಣ ಮಾಡಿ 20 ವರ್ಷಗಳಾಗಿದೆ. ಕಳಪೆ ನಿರ್ವಹಣೆಯಿಂದಾಗಿ ರಸ್ತೆ ಸೇತುವೆ ಕುಸಿದು ಬಿದ್ದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಹೆಚ್ಚಿನ ಅನಾಹುತ ಏನು ಸಂಭವಿಸಿಲ್ಲವಾದರೂ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸದ್ಯ ತೀತಾ ಜಲಾಶಯದ ಚಾನಲ್ ಪಕ್ಕ ತಾತ್ಕಾಲಿಕ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮಳೆ ಬೀಳುತ್ತಿರುವುದರಿಂದ ನೀರು ರಸ್ತೆಯಲ್ಲಿ ಇದ್ದು ಸಂಚಾರಕ್ಕೆ ಕಷ್ಟವಾಗಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಘಟನಾ ಸ್ಥಳದಿಂದ ನೀಡಿರುವ ವರದಿ ಇಲ್ಲಿದೆ ನೋಡಿ...!
ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
26/08/2022 07:07 pm