ಅಥಣಿ: ನಿನ್ನೆ ಮಧ್ಯಾಹ್ನ ನಮ್ಮ ಪಬ್ಲಿಕ್ ನೆಕ್ಸ್ಟ್ ವಾಹಿನಿ "ಪುರಸಭೆಯ ಆಸ್ತಿ ಹಾಳು ಮಾಡಿದ ಕಿಡಿಗೇಡಿಗಳು!" ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ಸುದ್ದಿಗೆ ಎಚ್ಚೆತ್ತು ಪುರಸಭೆ ಅಧಿಕಾರಿಗಳು ಕೂಡುವ ಬೆಂಚ್ ಒಡೆದ ಕಿಡಿಗೇಡಿಗಳಿಗೆ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ ಮೇರೆಗೆ ಬೆಂಚ್ ಒಡೆದ ವ್ಯಕ್ತಿಗಳೇ ತಮ್ಮ ತಪ್ಪೊಪ್ಪಿಕೊಂಡು ಸ್ವಂತ ಹಣದಿಂದ ಹೊಸ ಬೆಂಚ್ ಹಾಕಿಸಿರುವ ಘಟನೆ ಜರುಗಿದೆ.
ಅಥಣಿ ಪಟ್ಟಣದ ಮೀರಜ ರಸ್ತೆಗೆ ಹೊಂದಿಕೊಂಡು ಇರುವ ವಾಹನ ನಿಲ್ದಾಣ ಚಾಲಕರಿಗೆ ಅನುಕೂಲವಾಗುವಂತೆ ಪುರಸಭೆ ವತಿಯಿಂದ ಕೂಡುವ ಬೆಂಚ್ ಯಾರೋ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ, ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸುದ್ದಿಯೊಂದನ್ನು ಪ್ರಕಟಿಸಿತ್ತು. ಸುದ್ದಿ ಭಿತ್ತರಗೊಂಡ ಕ್ಷಣದಿಂದ ಕಾರ್ಯಪ್ರವೃತ್ತರಾದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದಾಗ , ಅವರು ತಮ್ಮ ತಪ್ಪೊಪ್ಪಿಗೊಂಡು ನಾವೆ ಅದನ್ನು ಸರಿಪಿಡಿಸುತ್ತೆವೆ ಎಂದು ಹೇಳಿ. ಮೂರು ಹೊಸ ಬೆಂಚುಗಳನ್ನು ಹಾಕಿ, ಇನ್ನು ಮುಂದೆ ಪುರಸಭೆ ಆಸ್ತಿಗೆ ಯಾವುದೇ ರೀತಿ ಹಾನಿ ಮಾಡುವುದಿಲ್ಲ ಎಂದಿದ್ದಾರೆ.
ಸಾರ್ವಜನಿಕ ಆಸ್ತಿ ಹಾಳಾಗಿದ್ದನ್ನು ನಮ್ಮ ಗಮನಕ್ಕೆ ತಂದು ಅದನ್ನು ಸರಿಪಡಿಸುವಲ್ಲಿ ಪ್ರಮುಖಪಾತ್ರ ವಹಿಸಿದ ಪಬ್ಲಿಕ್‌ನೆಕ್ಸ್ಟ ಪಾತ್ರ ಬಲುಮುಖ್ಯ ಎಂದು ಸಾರ್ವಜನಿಕರು ಹಾಗೂ ಪುರಸಭೆ ಸಿಬ್ಬಂದಿಗಳು ಪ್ರಶಂಸಿಸಿದ್ದಾರೆ.
PublicNext
07/09/2022 03:36 pm