ಅಥಣಿ : ಇಂದು ಮಧ್ಯಾಹ್ನ 01:30 ಕ್ಕೆ "ಅಥಣಿ ತಾಲೂಕು ಆಡಳಿತ ನಿರ್ಮಿಸಿದ ಚೆಕ್ ಪೋಸ್ಟ್ ಇದೀಗ ಕುಡುಕರ ಅಡ್ಡೆ" ಎಂಬ ಶೀರ್ಷಿಕೆಯಡಿ ನಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿಯೊಂದನ್ನು ಬಿತ್ತರಿಸಿತ್ತು.
ಸುದ್ದಿ ನೋಡಿದ ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ತಹಶೀಲ್ದಾರ ಸುರೇಶ ಮುಂಜೆ ಅವರು ಒಂದು ಗಂಟೆಯ ಅವಧಿಯೊಳಗೆ ಕುಡುಕರ ಅಡ್ಡೆಯಾಗಿದ್ದ ಚೆಕ್ ಪೋಸ್ಟ್ ಅನ್ನು ಖಿಳೆಗಾಂವ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಂದ ಸಂಪೂರ್ಣ ಸ್ವಚ್ಚಮಾಡಿಸಿ, ಸಾರ್ವಜನಿಕ ಎಚ್ಚರಿಕೆ ನೋಟಿಸು ಹಚ್ಚಿ ಕುಡುಕರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಚೆಕ್ ಪೋಸ್ಟ್ ಸ್ವಚ್ಚಗೊಳಿಸಿದ ಮಾಹಿತಿ ತಿಳಿಸಿ ಪಬ್ಲಿಕ್ ನೆಕ್ಸ್ಟ್ ಅಥಣಿ ವರದಿಗಾರರ ಜೊತೆ ಮಾತನಾಡಿ, ತಾಲೂಕಿನ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದ ನಿಮ್ಮ ಸುದ್ದಿವಾಹಿನಿಗೆ ಧನ್ಯವಾದಗಳು. ಹೇಳಿದ ಕೂಡಲೇ ಸ್ವಚ್ಚಗೊಳಿಸಿದ ಸಿಬ್ಬಂದಿಗಳಿಗೂ ಧನ್ಯವಾದ ತಿಳಿಸಿ, ಮತ್ತೆ ಇತರ ಸಮಸ್ಯೆಗಳಿದ್ರೆ ತಮ್ಮ ಗಮನಕ್ಕೆ ತರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಸಂತೋಷ ಬಡಕಂಬಿ, ಪಬ್ಲಿಕ್ ನೆಕ್ಸ್ಟ್ (ಅಥಣಿ)
PublicNext
18/08/2022 07:28 pm