ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವೆಲ್ಲ ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು: ಸಿಜೆಐ ರಮಣ

ನವದೆಹಲಿ: ನಮ್ಮ ವೃತ್ತಿಯ ಆರಂಭಿಕ ದಿನಗಳಲ್ಲಿ ಕಾನೂನು ಅಭ್ಯಾಸ ‌ಮಾಡಲು ಚೇಂಬರ್ ಹೋಗಲಿ, ಕೋರ್ಟ್ ಆವರಣದಲ್ಲೂ ಜಾಗ ಸಿಗುತ್ತಿರಲಿಲ್ಲ. ಆಗ ನಾವೆಲ್ಲ ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ.‌

ಪ್ರಕರಣವೊಂದರ ವಿಚಾರಣೆ ವೇಳೆ ಮಾತನಾಡಿದ ಅವರು, ವಕೀಲರಿಗೆ ಕಾನೂನು ಅಭ್ಯಾಸ ಮಾಡಲು ಈಗಿನ ಬಹುತೇಕ ಎಲ್ಲ ಕೋರ್ಟ್‌ಗಳಲ್ಲಿ ಚೇಂಬರ್ ಇಲ್ಲ. ಬೇಕಾದರೆ ಪರಿಶೀಲಿಸಿ ಎಂದು ಸಿಜೆಐ ಹೇಳಿದ್ದಾರೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನ ಹೊಸ ಕಟ್ಟಡದಲ್ಲಿ 400ಕ್ಕೂ ಹೆಚ್ಚು ವಕೀಲರ ಚೇಂಬರ್‌ಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ವಕೀಲರೊಬ್ಬರು ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಕೋರಿದ್ದರು. ಈ ಬಗ್ಗೆ ಅಸಮಾಧಾನಿತರಾದ ಸಿಜೆಐ ರಮಣ ಅವರು, ಬಹುಕಾಲದ ಬೇಡಿಕೆ ಆಗಿದ್ದ ಹೆಚ್ಚುವರಿ ಕೊಠಡಿಗಳ ಹಂಚಿಕೆ ಆಗಿರುವಾಗ ಮತ್ತೇಕೆ ಇಂತಹ ಪ್ರಕರಗಳನ್ನು ದಾಖಲಿಸಲಾಗುತ್ತಿದೆ ಎಂದು ಕೇಳಿದ್ದಾರೆ. 'ನಿಮಗೆ ಕೋಣೆಗಳ ಹಂಚಿಕೆ ಬೇಡ ಎಂದಾದಲ್ಲಿ ಇಲ್ಲಿನ ಆಸ್ತಿಯನ್ನು ಆನಂದಿಸಿ. ನಾನು ಸಿಜೆಐ ಆಗಿ ಮಾತನಾಡುತ್ತಿಲ್ಲ, ನಾವೆಲ್ಲರೂ ಇದರಿಂದ ಬಳಲಿದ್ದೇವೆ ಮತ್ತು ಬಹಳ ಕಷ್ಟದಿಂದ ಇದರ ಹಂಚಿಕೆಯೂ ಆಗಿದೆ. ವಕೀಲರು ಚೇಂಬರ್‌ಗಳ ರೂಪದಲ್ಲಿ ಅರಮನೆಗಳನ್ನು ನಿರೀಕ್ಷೆ ಮಾಡಬೇಡಿ' ಎಂದು ಹೇಳಿದರು.

Edited By : Nagaraj Tulugeri
PublicNext

PublicNext

22/07/2022 03:59 pm

Cinque Terre

35.82 K

Cinque Terre

2

ಸಂಬಂಧಿತ ಸುದ್ದಿ