ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುಸಿಯುವ ಹಂತದಲ್ಲಿ ಆರಕ್ಷಕರ ಕ್ವಾಟರ್ಸ್

ಬೆಂಗಳೂರು: ಇತ್ತಿಚೆಗೆ ಬೆಂಗಳೂರಿನಲ್ಲಿ ವಾಸಿಸುವುದು ಎಷ್ಟು ಸೇಫ್ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಕಾರಣ ಸರಣಿ ದುರಂತಗಳು ಅದರಲ್ಲೂ ಕಟ್ಟಡ ಕುಸಿತವಂತೂ ಸಾಮಾನ್ಯವಾಗಿದೆ.

ಸದ್ಯ ಕಾಟನ್ ಪೇಟೆಯ ಬಿನ್ನಿಮಿಲ್ ವೃತ್ತದ ಬಳಿ ಇರುವ 7 ಅಂತಸ್ತಿನ ಪೊಲೀಸ್ ಕ್ವಾಟರ್ಸ್ ಯಾವಾಗ ನೆಲಸಮವಾಗತ್ತೂ ಗೊತ್ತಿಲ್ಲ. ವಿಪರ್ಯಾಸ ಅಂದರೆ ಒಂದೂವರೆ ಅಡಿಯಷ್ಟು ಎಡಕ್ಕೆ ವಾಲಿರುವ ಕಟ್ಟಡದಲ್ಲಿ 32 ಕುಟುಂಬಗಳು ವಾಸಿಸುತ್ತಿವೆ.

ಪೊಲೀಸ್ ಕ್ವಾಟರ್ಸ್ ನ' ಬಿ ' ಬ್ಲಾಕ್ ಇದಾಗಿದ್ದು ಜಸ್ಟ್ ಮೂರು ವರ್ಷದ ಹಿಂದೆ ನಿರ್ಮಿಸಿದ್ದ ಕ್ವಾಟರ್ಸ್ ವಾಲಿರುವುದು ಕಳಪೆ ಕಾಮಗಾರಿಗೆ ಹಿಡಿದ ಕಥಗನ್ನಡಿಯಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟಿರುವ ಕಟ್ಟಡಕ್ಕೆ ಒಂದು ವರ್ಷದ ಹಿಂದೆಯಷ್ಟೇ ಪೊಲೀಸ್ ಕುಟುಂಬಗಳು ಎಂಟರ್ ಆಗಿವೆ.

Edited By : Manjunath H D
PublicNext

PublicNext

16/10/2021 04:50 pm

Cinque Terre

41 K

Cinque Terre

3

ಸಂಬಂಧಿತ ಸುದ್ದಿ