ಗದಗ: ತಡರಾತ್ರಿ ಸುರಿದ ಮಳೆಗೆ ಗದಗ ಜಿಲ್ಲೆಯಲ್ಲೂ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಗದಗನ ಹಾತಲಗೇರಿ ರಸ್ತೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಸಂಪೂರ್ಣ ಜಲಾವೃತವಾಗಿದೆ. 160 ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡ್ತಿದ್ದು, ವಿದ್ಯಾರ್ಥಿಗಳ ದಾಖಲಾತಿಗಳು, ಪುಸ್ತಕಗಳು, ಕಾಟ್, ಬೆಡ್, ಬಟ್ಟೆಗಳೆಲ್ಲಾ ನೀರಲ್ಲಿ ಮುಳುಗಡೆ ಆಗಿವೆ.
ಹಾಸ್ಟೆಲ್ ನ ಅಡುಗೆ ಸಾಮಗ್ರಿಗಳು ನೀರಲ್ಲಿ ತೇಲಾಡ್ತಿವೆ. ವಿದ್ಯಾರ್ಥಿಗಳು ರಾತ್ರಿಯೀಡಿ ಪರದಾಡಿದ್ದಾರೆ. ಪದವಿ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನಲೆ, ಹಾಲ್ ಟಿಕೇಟ್, ಬುಕ್ಸ್ ಹಾನಿಯಾಗಿವೆ. ಹಾಸ್ಟೆಲ್ ನ ಅಡುಗೆ ಸಾಮಗ್ರಿಗಳು ನೀರಲ್ಲಿ ಮುಳುಗಡೆ ಆಗಿದ್ದು, ವಿದ್ಯಾರ್ಥಿಗಳು ಊಟ, ಉಪಹಾರಕ್ಕೂ ಪರದಾಡುವಂತಾಗಿದೆ. ನೀರು ನುಗ್ಗುವುದರಿಂದ ಬಿಲ್ಡಿಂಗ್ ಕರೆಂಟ್ ಅರ್ಥ್ ಆಗುತ್ತೆ. ಏನಾದ್ರು ಅನಾಹುತ ನಡೆದ್ರೆ ಯಾರು ಹೊಣೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ ವಿದ್ಯಾರ್ಥಿಗಳು.
PublicNext
06/09/2022 07:25 pm