ಕಲಬುರಗಿ: ತೋಟಗಾರಿಕೆ ಇಲಾಖೆ ನಂಬಿದ ಅಫಜಲಪೂರ ತಾಲೂಕಿನ ದ್ರಾಕ್ಷಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಮೂರು ವರ್ಷಗಳಿಂದ ರೈತರಿಗೆ ಸಬ್ಸಿಡಿ ಹಣ ನೀಡದೆ ಅಧಿಕಾರಿಗಳು ಸತಾಸುತ್ತಿದ್ದಾರೆ. ಸಾಲಸೂಲ ಮಾಡಿ ದ್ರಾಕ್ಷಿ ಬೆಳೆದ ರೈತರು ಈಗ ಕಂಗಾಲಾಗಿದ್ದಾರೆ. ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಅಫಜಲಪೂರ ತಾಲೂಕಿನ ಮಾಶಾಳ್ ಗ್ರಾಮದ ರೈತರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಭರವಸೆಯಿಂದ ತಮ್ಮ ಹೊಲದಲ್ಲಿ ತಮ್ಮ ಸ್ವಂತ ಹಣ ಖರ್ಚು ಮಾಡಿ ದ್ರಾಕ್ಷಿ ಬೆಳೆ ಬೆಳೆದಿದ್ದರು. ಗ್ರಾಮದ ಸುಮಾರು 20 ಅಧಿಕ ರೈತರು ತಮ್ಮ ಹೊಲಗಳಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ನಿಮಗೆ ಲೋನ್ ಆಗಿದೆ. ಅದರಲ್ಲಿ 3.50 ಲಕ್ಷ ದುಡ್ಡು ಸಬ್ಸಿಡಿ ಹಣ ಬರುತ್ತೆ ಅಂತ ಹೇಳಿದ ಮೇಲೆ ರೈತರು ಸಾಲ ಮಾಡಿ ದ್ರಾಕ್ಷಿ ಬೆಳೆ ಬೆಳೆದು ಇದೀಗ ಸಬ್ಸಿಡಿ ಸಿಗದೇ ಕಂಗಾಲಾಗಿದ್ದಾರೆ. ಒಂದು ಕಂತಿನ ಮಾತ್ರ 50 ಸಾವಿರ ಸಿಕ್ಕಿದೆ ಉಳಿದ ಹಣ ಕೊಡಿ ಅಂದ್ರೆ ಆ ಹಣ ಕೋವಿಡ್ ಸಂದರ್ಭದಲ್ಲಿ ಬೇರೆ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಸರ್ಕಾರದಲ್ಲಿ ಕೂಡ ದುಡ್ಡು ಇಲ್ಲ.
ಈಗಾಗಿ ಸದ್ಯಕ್ಕೆ ಹಣ ಸಿಗೋದಿಲ್ಲ. ಹಣ ಬಂದ ತಕ್ಷಣ ಕೋಡುತ್ತೆವೆ ಅಂತ ಅಧಿಕಾರಿಗಳು ಉಢಾಪೆಯಾಗಿ ಮಾತನಾಡುತ್ತಿದ್ದಾರೆ. ಈಗ ಸಾಲ ಸೂಲ ಮಾಡಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಸಾಯುವ ಪರಿಸ್ಥಿತಿ ಬಂದಿದೆ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಅನೇಕ ಬಾರಿ ಸಂಭಂದಿಸಿದ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಕಲಬುರಗಿ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ. ಬಜೆಟ್ ಬಂದ ತಕ್ಷಣ ಕೋಡುತ್ತೆವೆ. ಸದ್ಯ ಹಣ ಅಂತಾರೆ. ಈಗ 10 ಸಾವಿರ ಮಾತ್ರ ಬಂದಿದೆ. ಎರಡನೇ ಕಂತು ಕೋಡುತ್ತೆವೆ ಅಂತಾರೆ ಹತ್ತು ಸಾವಿರದಲ್ಲಿ ನಾವು ಏನ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಬ್ಬೊಬ್ಬರದು 10 ಸಾಲ ಆಗಿದೆ. ನಮಗೆ ಸಬ್ಸಿಡಿ ಹಣ ಬಂದ್ರೆ ಸ್ವಲ್ಪ ಬಾರ ಕಮ್ಮಿ ಆಗುತ್ತೆ ಎಂದ್ರು.
ಒಟ್ಟಿನಲ್ಲಿ, ಸರ್ಕಾರ ರೈತರು ಅಭಿವೃದ್ಧಿ ಆಗಲಿ ಅಂತ ಕಾಟಾಚಾರಕ್ಕೆ ಹೊಸ ಹೊಸ ಸ್ಕಿಮ್ ತರುತ್ವೆ. ಆದ್ರೆ ಅವುಗಳನ್ನ ಅಧಿಕಾರಿಗಳು ಸರಿಯಾಗಿ ರೈತರಿಗೆ ಮುಟ್ಟಿಸದೆ ಈ ತರಾ ಸತಾಯಿಸಿದ್ರೆ ಹೇಗೆ ಎಂಬುದು ಪ್ರಶ್ನೆಯಾಗಿದೆ.
PublicNext
04/10/2022 12:00 pm