ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಎಲ್ಲ ಓಪನ್: ದೇವಸ್ಥಾನ, ಥಿಯೇಟರ್, ಕ್ಲಬ್ ತೆರೆಯಲು ಅನುಮತಿ

ಬೆಂಗಳೂರು: ಕೊರೊನಾ ಎರಡನೇ ಅಲೆಯ ಭೀತಿಯ ಹಿನ್ನೆಲೆ ಲಾಕ್ ಡೌನ್ ಹೇರಿದಾಗಿನಿಂದ ಇಲ್ಲಿಯವರೆಗೂ ಕೆಲವು ಸಾರ್ವಜನಿಕ ಸೇವೆಗಳು ಹಾಗೂ ಜನ ಹೆಚ್ಚಾಗಿ ಸೇರುವ ಸ್ಥಳಗಳನ್ನು ತೆರೆಯಲು ಇದುವರೆಗೆ ಅನುಮತಿ ನೀಡಿರಲಿಲ್ಲ. ಕೆಲವೆಡೆ ನಿಯಮ ಸಡಿಲಿಕೆ ಮಾಡಲಾಗಿತ್ತು. ಆದ್ರೆ ಈಗ ಎಲ್ಲದಕ್ಕೂ ಅನುಮತಿ ನೀಡಲಾಗಿದೆ. ಇಂದಿನಿಂದ ರಾಜ್ಯದ ಎಲ್ಲ ದೇವಸ್ಥಾನಗಳು, ಚಿತ್ರಮಂದಿರಗಳು ಹಾಗೂ ಪಬ್-ಕ್ಲಬ್‌ಗಳನ್ನು ತೆರೆಯಲು ಸರ್ಕಾರ ಅನುಮತಿಸಿದೆ. ಕಳೆದ 25ರಂದು ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಎಲ್ಲದಕ್ಕೂ 100% ರಷ್ಟು ಅನುಮತಿ ಕೊಟ್ಟು ಆದೇಶ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಇಂದಿನಿಂದ ಎಲ್ಲವೂ ಸಂಪೂರ್ಣವಾಗಿ ಅನ್ ಲಾಕ್ ಆಗುತ್ತಿದೆ.

ಸುಮಾರು 5 ತಿಂಗಳ ನಂತರ ಥಿಯೇಟರ್‌ಗಳಲ್ಲಿ 100% ಆಸನ ಭರ್ತಿಗೆ ಅವಕಾಶ ಸಿಕ್ಕಿದೆ. ಬರೋಬ್ಬರಿ 5 ತಿಂಗಳ ವನವಾಸ ಮುಗಿಸಿ, ಚಿತ್ರರಂಗ ಮತ್ತೆ ಪುಟಿದೇಳಲು ಸಜ್ಜಾಗಿದೆ. ಏಪ್ರಿಲ್ 1ರಂದು ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ನಟನೆ ಯುವರತ್ನ ಸಿನಿಮಾಗೆ, ಮೂರೇ ದಿನದಲ್ಲಿ ಶಾಕ್ ಕೊಟ್ಟಿತ್ತು ಸರ್ಕಾರ. ಅದಸಗಿ 5 ತಿಂಗಳ ಬಳಿಕ ಇಂದಿನಿಂದ ಮತ್ತೆ ಬೆಳ್ಳಿಪರದೆಗೆ ಹೊಸ ರಂಗು ಬರಲಿದೆ.. ಹೀಗಾಗಿ ಚಿತ್ರಮಂದಿರಗಳಲ್ಲಿ ಸ್ವಚ್ಛತಾ ಕಾರ್ಯ ಶುರುವಾಗಿದೆ.

Edited By : Nagaraj Tulugeri
PublicNext

PublicNext

01/10/2021 07:48 am

Cinque Terre

63.42 K

Cinque Terre

4