ದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಈಗ ಪೂರ್ಣವಾಗಿ ಟಾಟಾ ಸನ್ಸ್ ಸಂಸ್ಥೆಯ ಸುಪರ್ದಿಗೆ ಸೇರಿದೆ. ನಿನ್ನೆ ಗುರುವಾರ ಏರ್ ಇಂಡಿಯಾ ತನ್ನ ಮೊದಲ ಹಾರಾಟವನ್ನು ಆರಂಭಿಸಿದೆ. ವಿಮಾನದೊಳಗೆ ಆಧುನೀಕರಣಕ್ಕಿಂತ ಪ್ರಯಾಣಿಕರ ಸುರಕ್ಷತೆ, ಉತ್ಕೃಷ್ಟ ಗುಣಮಟ್ಟದ ಊಟ, ಹಾಗೂ ಉನ್ನತ ಸೌಲಭ್ಯಗಳನ್ನು ನೀಡಲು ಆದ್ಯತೆ ನೀಡಲಾಗಿದೆ.
ರಾಷ್ಟ್ರೀಕೃತಗೊಂಡಿದ್ದ ಏರ್ ಇಂಡಿಯಾ ಸಂಸ್ಥೆ ಈಗ ಮರಳಿ ಟಾಟಾ ಸಮೂಹ ಸಂಸ್ಥೆಗೆ ಸೇರಿದ್ದು ಗ್ರಾಹಕರಿಗೆ ಸ್ಮರಣೀಯ ಸೇವೆ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದು 'ಟಾಟಾ ಸನ್ಸ್' ಚೇರ್‌ಮನ್ ಚಂದ್ರಸೇಖರನ್ ಹೇಳಿದ್ದಾರೆ.
PublicNext
28/01/2022 05:25 pm