ನವದೆಹಲಿ: ವಿಮಾನ ಪ್ರಯಾಣದಲ್ಲಿ ಕೋವಿಡ್ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ 3 ಸೀಟ್‌ಗಳನ್ನು ಖಾಲಿ ಇಡುವ ನಿಯಮವನ್ನೂ ಸಡಿಲಿಸಲಾಗಿದ್ದು ವಿಮಾನದಲ್ಲಿನ ಸಿಬ್ಬಂದಿಗೆ ಪಿಪಿಇ ಕಿಟ್ ಧರಿಸುವ ನಿಯಮದಿಂದಲೂ ವಿನಾಯಿತಿ ನೀಡಲಾಗಿದೆ.
ಇನ್ನು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರಿಗೆ ಪ್ಯಾಟ್ ಡೌನ್ ಶೋಧ ಪ್ರಕ್ರಿಯೆಯನ್ನೂ ಪುನಾರಂಭಗೊಳಿಸಲು ಅವಕಾಶ ನೀಡಲಾಗಿದೆ. ಸುಗಮ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ ಎಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
PublicNext
23/03/2022 07:48 am