ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯನ್ನು ರಕ್ಷಿಸಿದ ಸ್ಥಳೀಯರು

ಗದಗ: ಮಳೆ ನಿಂತರೂ ಮರದ ಹನಿ ನಿಂತಿಲ್ಲ ಅನ್ನೋ ಹಾಗೆ ಗದಗ ಜಿಲ್ಲೆಯಲ್ಲಿ ಮಳೆ ಆಗಾಗ ಬಂದು ಹೋಗುತ್ತಿದ್ದರೂ, ಒಂದಿಲ್ಲೊಂದು ಅವಾಂತರಗಳು ಮಾತ್ರ ಮುಂದುವರೆದಿವೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ವೃದ್ಧೆಯೋರ್ವಳನ್ನ ರಕ್ಷಿಸಲಾಗಿದೆ. ನರಗುಂದ ತಾಲೂಕಿನ ಸುರಕೋಡ ಗ್ರಾಮದ ವೃದ್ಧೆ ಚಿನ್ನವ್ವ ಮಲಕಾಜಪ್ಪನವರ, ಹೆಸರು ಕಾಳು ಬಿಡಿಸಲು ಹೊಲಕ್ಕೆ ತೆರಳಿದ್ದಳು. ಈ ವೇಳೆ ಬೆಣ್ಣೆಹಳ್ಳದ ಪ್ರವಾಹ ಏಕಾಏಕಿ ಉಕ್ಕಿಬಂದ ಹಿನ್ನೆಲೆ ವೃದ್ಧೆಗೆ ಯಾವುದೇ ದಾರಿ ತೋಚದೆ ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದಾಳೆ. ತಕ್ಷಣ ಜಮೀ‌ನಿ‌ನ ಸಮೀಪದಲ್ಲಿದ್ದ ಅದೇ ಗ್ರಾಮದ ಯಂಕಪ್ಪ ಸುಗ್ಗಿ ಹಾಗೂ ಲಕ್ಷ್ಮಣ ಶಿರಸಂಗಿ ಅವರು ವೃದ್ದೆಯನ್ನ ರಕ್ಷಣೆ ಮಾಡಿದ್ದಾರೆ. ಬದುಕಿತು ಬಡಜೀವ ಅಂತ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆ ನಿಟ್ಟುಸಿರು ಬಿಟ್ಟಿದ್ದಾಳೆ.

Edited By : Nagesh Gaonkar
PublicNext

PublicNext

31/08/2022 09:34 pm

Cinque Terre

37.28 K

Cinque Terre

0

ಸಂಬಂಧಿತ ಸುದ್ದಿ