ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಎ.ಜಿ.ಕೊಡ್ಗಿಯವರು ಕರಾವಳಿ ಅಭಿವೃದ್ಧಿಯ ಹರಿಕಾರ ಶೋಭಾ ಕರಂದ್ಲಾಜೆ

ಕುಂದಾಪುರ: ನಿನ್ನೆ ಮೃತಪಟ್ಟ ಹಿರಿಯ ರಾಜಕಾರಣಿ, ಬಿಜೆಪಿ ಮುಖಂಡ, ಪ್ರಗತಿಪರ ಕೃಷಿಕ ಎ.ಜಿ.ಕೊಡ್ಗಿಯವರ ಅಂತಿಮ ವಿಧಿವಿಧಾನಗಳು ಇಂದು ಅವರ ಹುಟ್ಟೂರಲ್ಲಿ ನಡೆಯುತ್ತಿವೆ.ಹಲವು ಗಣ್ಯರು ಕೊಡ್ಗಿ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.

ಸಚಿವೆ ಶೋಭಾ ಕರಂದ್ಲಾಜೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಇವತ್ತು ಅಂತಿಮ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ , ಎ.ಜಿ ಕೊಡ್ಗಿಯವರು ಹಿರಿಯ ರಾಜಕೀಯ ಮುತ್ಸದ್ಧಿ. ಕರಾವಳಿ ಅಭಿವೃದ್ಧಿಯ ಕನಸನ್ನು ಅವರು ಕಂಡಿದ್ದರು. ವಿಶೇಷವಾಗಿ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅವರ ಪಾತ್ರ ತುಂಬಾ ದೊಡ್ಡದು. ಸ್ವರ್ಣ ನದಿಯನ್ನು ಇತರೆ ನದಿಗಳ ಜೊತೆ ಜೋಡಿಸುವ ಕನಸನ್ನು ಕಂಡಿದ್ದರು. ಅವರು ನನ್ನ ರಾಜಕೀಯ ಗುರು. ನಾನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಲು ಕಾರಣ ಅವರೇ ಕಾರಣಕರ್ತರು. ಅವರ ನಿಧನದಿಂದ ಪಕ್ಷಕ್ಕೆ ಮತ್ತು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Edited By : Somashekar
PublicNext

PublicNext

14/06/2022 03:42 pm

Cinque Terre

49.77 K

Cinque Terre

2

ಸಂಬಂಧಿತ ಸುದ್ದಿ