ಯಾದಗಿರಿ...Exclusive ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ತಕರಾರು..ಪ್ರತಿಭಟನೆಗೆ ಕುಳಿತ ಜನರು.!

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಹದನೂರು ಗ್ರಾಮದಲ್ಲಿ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುವ ವಿಚಾರವಾಗಿ ಇಂದು ಪರಿಶಿಷ್ಟ ಜಾತಿ ಸಮುದಾಯದವರು ರಸ್ತೆ ಮೇಲೆ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಇವತ್ತು ಎಸ್ಸಿ ವಾರ್ಡ್ ನಲ್ಲಿ ಮುದಕಪ್ಪ ಎಂಬ ವೃದ್ಧ ಮೃತಪಟ್ಟಿದ್ದು, ಸ್ಮಶಾನದಲ್ಲಿ ಶವ ಇಡಲು ಗ್ರಾಮದ ರಾಮನಗೌಡ ಎಂಬುವವರು ತಕರಾರು ಮಾಡುತ್ತಿದ್ದಾರೆ ಅಂತಾ ಶವದ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಇನ್ನು ಈ ರುದ್ರಭೂಮಿಯ ಅರ್ಧದಷ್ಟು ಜಾಗ ರಾಮನಗೌಡ ಅವರ ಹೆಸ್ರಲ್ಲಿದ್ದು, ಮೊದಲಿನಿಂದಲೂ ಅದೇ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುತ್ತಾ ಬಂದಿದ್ದು, ಈಗಲೂ ನಮಗೆ ಅಲ್ಲೇ ಜಾಗ ಕೊಡಿ ಅಂತಾ ಪರಿಶಿಷ್ಟ ಜಾತಿ ಸಮುದಾಯವರು ಪಟ್ಟು ಹಿಡಿದ ದೃಶ್ಯ ಕಂಡು ಬಂತು.

ಇನ್ನೂ ಇವರಿಗೆ ಸರ್ಕಾರದಿಂದ ಜಾಗ ಗುರುತಿಸಿಲ್ಲ. ಮೊದಲಿನಿಂದಲೂ ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಾ ಬರುತ್ತಿದ್ದು, ಈಗ ಅಲ್ಲೇ ಶವ ಹೂಳಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಈ ಗ್ರಾಮದಲ್ಲಿ ಮಾನವೀಯತೆ ಅನ್ನೋದೇ ಮರೆತು ಹೋಯ್ತಾ ಎಂಬ ಪ್ರಶೆ ಕಾಡುತ್ತಿದ್ದು, ಅಲ್ಲದೇ ಸಂಭಂದಪಟ್ಟ ಅಧಿಕಾರಿಗಳು ರುದ್ರಭೂಮಿ ಜಾಗವು ಗುರುತಿಸಿಲ್ಲ. ಶವ ಮನೆಯಲ್ಲೇ ಇಟ್ಟುಕೊಂಡು ಕುಳಿತಿರುವ ಅಮಾನವೀಯ ಘಟನೆ ಮಾತ್ರ ಸಮಾಜ ತಲೆ ತಗ್ಗೆಸುವಂತಿದೆ.

ಮೌನೇಶ ಬಿ. ಮಂಗಿಹಾಳ,
ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Public News

Public News

2 months ago

Cinque Terre

43.91 K

Cinque Terre

5

 • ಕರುಣಾಡು ಕಣ್ಣು
  ಕರುಣಾಡು ಕಣ್ಣು

  ಈ ಕರೋನದ ಕಾರಣದಿಂದಾಗಿ ಅನೇಕ ಜನರು ತಮ್ಮ ಕುಟುಂಬವನ್ನು ಕಳೆದುಕೊಂಡರು, ಕರೋನಾ ನಮ್ಮನ್ನು ಅರಿತುಕೊಂಡಿದೆ, ಯಾರೂ ಉನ್ನತ ಅಥವಾ ಕೆಳಮಟ್ಟದಲ್ಲಿಲ್ಲ ಆದರೆ ನಾವು ಇನ್ನೂ ಜನರು ಹಿಂದಿನ ಮೂಡ ನಂಬಿಕೆ ಮೆಲೆ ಅವಲಂಬಿತ .. ಅವರ ಮರಣದ ನಂತರ ಮಾನವೀಯತೆಗೆ ನಾಚಿಕೆಗೇಡು .. ಈ ಕರೋನಾದಲ್ಲಿ ಹಿಂದೂ ಮತ್ತು ಮುಸ್ಲಿಂ ಜನರು ಸಹ ಅಂತ್ಯಕ್ರಿಯೆಗೆ ಪರಸ್ಪರ ಸಹಾಯ ಮಾಡಿದರು... ಸರ್ಕಾರ ಮಾತ್ರ ಜವಾಬ್ದಾರನಾಗಿರುವುದಿಲ್ಲ ಅವರು ಸಮಾಧಿ ಸ್ಥಳವನ್ನು ಪಡೆಯಲು ಸಾಧ್ಯವಾಗದಿದ್ದರೆ, ಇಬ್ಬರೂ ಹೋರಾಡಬೇಕು,ಆದರೆ ಯಾರಾದರೂ ತೀರಿಕೊಂಡರೆ ಖಂಡಿತವಾಗಿಯೂ ಎಲ್ಲರೂ ಅವರೊಂದಿಗೆ ಇರಬೇಕಾಗುತ್ತದೆ, ಪ್ರಾರ್ಥನೆ ದೇವರು ನಮ್ಮ ಮನಸ್ಸಿನಲ್ಲಿ ಕಡಿಮೆ ಮತ್ತು ಶ್ರೇಷ್ಠ ಜಾತಿ ಎಂದು ತೆಗೆದುಹಾಕಬೇಕು

 • santosh jadhav
  santosh jadhav

  manaviyate bagge mathadoru dhuddu kottu jaga karidhi madi nive adhana rudhra bumi ge kottu bidi aagutta bereawra jaga andhre nimge free bidbeka

 • KALLAYYA HIREMATH
  KALLAYYA HIREMATH

  Avan sattmele aa jaga tagond hogtana? Yav paristitili hege irbeku gottagalwa

 • Uttam
  Uttam

  ಆ ಜಾತಿ ಈ ಜಾತಿ ಅಂತಲ್ಲದೇ ಎಲ್ಲಾ ಜಾತಿಗಳಲ್ಲೂ ಕೆಲವು ಜನ ಮಾತ್ರ ಜಾತಿ ವ್ಯವಸ್ಥೆಯನ್ನು ಗಟ್ಟಿಯಾಗಿ ಅಪ್ಪಿಕೊಂಡೊರುವದೇ ಈ ತರಹದ ತಂಟೆಗಳಿಗೆ ಕಾರಣ. ಸರಿಯಾದ ಶಿಕ್ಷಣದ ಕೊರತೆ, ಉದಾರ ಮನಸ್ಥಿತಿ , ಸಹಕಾರ ಮನೋಭಾವದ ಕೊರತೆ ಈ ತರಹದ ಅಮಾನವೀಯ ಘಟನೆಗಳಿಗೆ ಮೂಲ ಕಾರಣ ಎಂದರೂ ತಪ್ಪಲ್ಲ. ಎಲ್ಲರೂ ತಪ್ಪದೇ ಖಂಡಿಸಲೇಬೇಕಾದ ಘಟನೆ ಇದು.

 • manjunath
  manjunath

  e reti madodu tappu. janakke ennu buddi baratane ella. yalla manusharu vande antha yake teleta ella.