ಸೌದಿ ಅರೆಬಿಯಾದ ಪ್ರಿನ್ಸ್ ಈಗೊಂದು ಹೊಸ "ದಿ ಲೈನ್" ಅನ್ನೋ ಪ್ರೊಜೆಕ್ಟ್ ಪ್ಲಾನ್ ಮಾಡಿದ್ದರೆ. ಮರಳು ಭೂಮಿ ಮೇಲೆ ಸ್ವರ್ಗವನ್ನ ಸೃಷ್ಟಿಸೋ ಪರಿಸರ ಸ್ನೇಹಿ ಪ್ಲಾನ್ ಇದಾಗಿದೆ. ಇಲ್ಲಿ ಎಲ್ಲವೂ ಪೆಟ್ರೋಪಾಲಿಟಿನ್ ಸಿಟಿ ಹಾಗೆ ವ್ಯವಸ್ಥೆ ಇರುತ್ತದೆ.ಅಂತಹ ನಗರ ಯೋಜನೆಯ ನೀಲಿ ನಕ್ಷೆಯನ್ನ ವೀಡಿಯೋ ಮೂಲಕವೇ ಇಲ್ಲಿ ರಿವೀಲ್ ಮಾಡಲಾಗಿದೆ.
ಹೌದು. ಸೌದಿ ಅರೆಬಿಯಾ ರಾಜಾ ಮೊಹಮ್ಮದ್ ಬಿನ್ ಸಲ್ಮಾನ್ ಅಬ್ದುಲಜೀಜ್ ತಮ್ಮ ಕನಸಿನ ಊರಿನ ಬಗ್ಗೆ ತುಂಬಾ ದೊಡ್ಡ ಆಸೆಯನ್ನ ಇಟ್ಟುಕೊಂಡಿದ್ದಾರೆ. ಈ ಒಂದು ಕನಸಿನ ಊರಲ್ಲಿ ಎಲ್ಲವೂ ಇರುತ್ತದೆ ಅಂತಲೇ ಹೇಳಿದ್ದಾರೆ.
ದಿ ಲೈನ್ ಯೋಜನೆ ಒಂದು ರೀತಿ ಸೌದಿ ಅರೆಬಿಯಾದ ನಾಗರಿಕತೆಯ ಕ್ರಾಂತಿಯಾಗಿದ್ದು, ಇಲ್ಲಿ ಪರಿಸರ ಸ್ನೇಹಿ ಕಾರುಗಳೇ ಇಲ್ಲಿ ಓಡಾಡುತ್ತವೆ. ಟ್ರಾಫಿಕ್ ಕಿರಿಕಿರಿ ಇಲ್ಲಿ ಇರೋದಿಲ್ಲ. ಒಂದು ಅದ್ಭುತ ಮೆಟ್ರೋಪಾಲಿಟಿನ್ ಸಿಟಿ ಇದಾಗಿರುತ್ತದೆ ಎಂದೇ ಸೌದಿ ರಾಜಾ ಹೇಳಿಕೊಂಡಿದ್ದಾರೆ.
PublicNext
08/08/2022 09:27 am