ಭೋಪಾಲ್: ಆಂಬುಲೆನ್ಸ್ ಪುಟ್ಟ ತಮ್ಮನ ಇಲ್ಲದೇ ಶವವನ್ನು ಮಡಿಲಲ್ಲಿ ಇರಿಸಿಕೊಂಡಿದ್ದ ಘಟನೆ ಇತ್ತೀಚಿಗೆ ನಡೆದಿತ್ತು. ಈಗ ಅಂತದ್ದೇ ಘಟನೆ ಅದೇ ರಾಜ್ಯದಲ್ಲಿ ನಡೆದಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ಮಕ್ಕಳು ಶಹದೋಲ್ ಜಿಲ್ಲೆಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅನುಪ್ಪುರ್ ಜಿಲ್ಲೆಯ ಗೋಡಾರ ಗ್ರಾಮದ ವ್ಯಕ್ತಿಗಳು ದಾಖಲಿಸಿದ್ದರು. ಆದರೆ ಅಲ್ಲಿ ಸಮರ್ಪಕ ಚಿಕಿತ್ಸೆ ಸಿಗದ ಕಾರಣ ನಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ಮಕ್ಕಳು ಆರೋಪಿಸಿದ್ದಾರೆ.
ನಂತರ ಸುಮಾರು ಹೊತ್ತು ಕಾದರೂ ಶವ ಸಾಗಿಸಲು ನಮಗೆ ಆಂಬುಲೆನ್ಸ್ ಕೊಟ್ಟಿಲ್ಲ. ಖಾಸಗಿ ಆಂಬುಲೆನ್ಸ್‌ನವರು ಐದು ಸಾವಿರ ಹಣ ಕೇಳಿದರು. ಹೀಗಾಗಿ ನಾವೇ ಮರದ ಹಲಗೆ ಖರೀದಿಸಿ ಅದರ ಮೇಲೆ ಶವ ಸಾಗಿಸಿದ್ದೇವೆ ಎಂದು ಮೃತ ತಾಯಿಯ ಪುತ್ರ ಸುಂದರ್ ಯಾದವ್ ತಿಳಿಸಿದ್ದಾರೆ.
PublicNext
02/08/2022 04:01 pm