ಬೆಂಗಳೂರು: ಸಿಕ್ಕಿದ್ದೆಲ್ಲ ನನ್ನೊಬ್ಬನಿಗೆ ಇರಲಿ ಎನ್ನುವ ಕಾಲ ಇದು. ಇನ್ಯಾರದ್ದೋ ಹಣ ಹೇಗಾದ್ರೂ ಮಾಡಿ ದೋಚಿಕೊಂಡು ಬೆಳಗಾಗುವುದರಲ್ಲಿ ಶ್ರೀಮಂತರಾಗಬೇಕು ಎನ್ನುವ ಅದೆಷ್ಟೋ ಮಂದಿ ನಮ್ಮ ನಡುವೆ ಇರುತ್ತಾರೆ. ಅಂತವರ ನಡುವೆ ಜನಸಮಾನ್ಯರಿಗಾಗಿ ಕೋಟಿ ಕೋಟಿ ದಾನ ಮಾಡುವ ನಿಸ್ವಾರ್ಥದ ಮಂದಿಯೂ ಇಲ್ಲಿದ್ದಾರೆ.
ಹೌದು..ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಈ ದಂಪತಿಗಳು 425 ಕೋಟಿ ರೂಪಾಯಿ ದಾನ ನೀಡಿದ್ದಾರೆ. ಬೇರೆಯವರ ಹಣವನ್ನು ದೋಚಿ ವಂಚನೆ ಮಾಡುವ ಈಗಿನ ಯುಗದಲ್ಲಿ ತಮ್ಮ ಸ್ವಂತ ಹಣದಲ್ಲಿ ಇತರರಿಗೆ ನೆರವಾಗಲು ನಾಲ್ಕು ಜನರ ಗುಂಪೊಂದು ಸಿದ್ಧವಾಗಿದೆ. ಭಾರತೀಯ ವಿಜ್ಞಾನ ಮಂದಿರದಲ್ಲಿ (IISC) 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬರೋಬ್ಬರಿ 425 ಕೋಟಿ ರೂಪಾಯಿ ದಾನನೀಡಿದ್ದಾರೆ. ಸುಸ್ಮಿತಾ, ಸುಬ್ರತೊ ಬಾಗ್ಚಿ ಹಾಗೂ ರಾಧಾ, ಎನ್.ಎಸ್ ಪಾರ್ಥಸಾರಥಿ ಎಂಬ ದಂಪತಿಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದ್ದಾರೆ.
ಪ್ರಸಿದ್ಧ ಐಟಿ ಕಂಪನಿ ಮೈಂಡ್ ಟ್ರೀ ಸಹ ಸಂಸ್ಥಾಪಕರಾಗಿರುವ ಸುಬ್ರತೊ ಬಾಗ್ಚಿ ಮೂಲತಃ ಒಡಿಶಾದವರು. ಒಡಿಶಾ ಸರ್ಕಾರದಲ್ಲಿ ಗುಮಾಸ್ತನಾಗಿದ್ದ ಸುಬ್ರತೊ ನಂತರ ಉದ್ಯಮಶೀಲತೆಯತ್ತ ಹೆಜ್ಜೆ ಇಟ್ಟವರು. ಪ್ರೊ, ಲ್ಯೂಸೆಂಟ್ ಕಂಪನಿಗಳಲ್ಲಿ ದಶಕದ ಅನುಭವದ ನಂತರ, ಇದೀಗ ಐಐಎಸ್‌ಸಿಗೆ ದಾಣ ನೀಡಿರುವ ಎನ್‌ಎಸ್ ಪಾರ್ಥಸಾರಥಿ ಅವರೂ ಸೇರಿ 9 ಸ್ನೇಹಿತರ ಜತೆಗೆ ಮೈಂಡ್ ಟ್ರೀ ಸ್ಥಾಪಿಸಿದರು. ಪಾರ್ಥಸಾರಥಿ ಸಹ ವಿಪ್ರೊದಲ್ಲಿ ಬಾಗ್ಚಿ ಅವರ ಜತೆಗೆ ಕೆಲಸ ಮಾಡಿದ್ದರು.
ಆಸ್ಪತ್ರೆ ವಿಶೇಷತೆ...
ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯು ರೋಗಪರೀಕ್ಷೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ, ನರವಿಜ್ಞಾನ, ಎಂಡೋಕ್ರಿನಾಲಜಿ, ಗ್ಯಾಸ್ಟ್ರೋ ಎಂಟರಾಲಜಿ, ನೆಪ್ರಾಲಜಿ, ಯುರಾಲಜಿ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೊಬೋಟಿಕ್ ಶಸಚಿಕಿತ್ಸೆ, ನೇತ್ರ ವಿಜ್ಞಾನ ಸೇರಿ ಹಲವು ವಿಷಯ ವಿಭಾಗಗಳನ್ನು ಹೊಂದಿರಲಿದೆ.
PublicNext
15/02/2022 02:27 pm