ಮೊರೆನಾ: ತನ್ನ ಮಡಿಲಲ್ಲಿ 2 ವರ್ಷದ ತಮ್ಮನ ಶವ ಇಟ್ಟುಕೊಂಡ 8 ವರ್ಷದ ಅಣ್ಣ ಆ್ಯಂಬುಲೆನ್ಸ್‌ಗಾಗಿ ಕಾಯುತ್ತ ಬೀದಿಯಲ್ಲಿ ಕುಳಿತಿದ್ದಾನೆ.
ಕರಳು ಹಿಂಡುವ ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅಂಬಾಹ್ ಎಂಬಲ್ಲಿನ ಪೂಜಾರಾಮ್ ಜಾಟವ್ ಎಂಬ ವ್ಯಕ್ತಿಯ 2 ವರ್ಷದ ಪುತ್ರ ಹೊಟ್ಟೆಯಲ್ಲಿ ನೀರು ತುಂಬುವ ಎನಿಮೀಯ ಕಾಯಿಲೆಯಿಂದ ಇಂದು ರವಿವಾರ ಮೃತಪಟ್ಟಿದ್ದಾನೆ. ಆಗ ಶವ ಸಾಗಿಸಲು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಲಭ್ಯ ಇರಲಿಲ್ಲ. ಹೀಗಾಗಿ ತಂದೆ ಪೂಜಾರಾಮ್ ಆಂಬುಲೆನ್ಸ್ ತರಲು ಹೋಗಿದ್ದಾರೆ. ಆದ್ರೆ ಅವರಿಗೆ ಕಡಿಮೆ ಖರ್ಚಿನಲ್ಲಿ ಶವ ಸಾಗಿಸಲು ಆಂಬುಲೆನ್ಸ್ ಅಥವಾ ವಾಹನ ಸಿಕ್ಕಿಲ್ಲ ಎನ್ನಲಾಗಿದೆ. ಈ ವೇಳೆ ಪೂಜಾರಾಮ್‌ನ ಹಿರಿಯ ಮಗ ತನ್ನ ಪುಟ್ಟ ತಮ್ಮನ ಶವವನ್ನು ಮಡಿಲಲ್ಲಿ ಇರಿಸಿ ಬೀದಿಯಲ್ಲಿ ಕುಳಿತಿದ್ದಾನೆ.
ಈ ದೃಶ್ಯ ಕಂಡ ಸ್ಥಳೀಯ ಪೊಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್ ಎಂಬುವರು ಕೂಡಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಮಧ್ಯಪ್ರದೇಶದ ಮಾಧ್ಯಮಗಳು ವರದಿ ಮಾಡಿವೆ.
PublicNext
10/07/2022 11:12 pm