ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಗೆ ಬರೆದಿರುವ ಪತ್ರದಲ್ಲಿ ಕರ್ನಾಟಕ ಸ್ಥಳೀಯ ವೈದ್ಯರುಗಳ ಒಕ್ಕೂಟ, ವೈದ್ಯಕೀಯ ವಿದ್ಯಾರ್ಥಿಗಳು, ಹೌಸ್ ಸರ್ಜನ್ ಗಳು ಹಲವು ತಿಂಗಳುಗಳಿಂದ ಕೋವಿಡ್ 19 ಕರ್ತವ್ಯದಲ್ಲಿದ್ದು ಇದರಿಂದ ಅವರ ವೈದ್ಯಕೀಯ ಶಿಕ್ಷಣ ಕಲಿಕೆಗೆ ಹಿನ್ನೆಡೆಯಾಗುತ್ತಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ಟ್ಯೂಷನ್ ಶುಲ್ಕವನ್ನು ಸರ್ಕಾರ ಮನ್ನಾ ಮಾಡಬೇಕು, ತಮ್ಮ ಕೋವಿಡ್ ಸೇವೆಗಳನ್ನು ಗುರುತಿಸಿ ಕೋವಿಡ್ ಅಪಾಯ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದೆ.
ನಮ್ಮ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೋವಿಡ್-19 ಕರ್ತವ್ಯಕ್ಕೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಒಕ್ಕೂಟದಲ್ಲಿ ಸುಮಾರು 5 ಸಾವಿರ ಸ್ಥಳೀಯ ವೈದ್ಯರುಗಳಿದ್ದಾರೆ.
ಕರ್ನಾಟಕ ಸ್ಥಳೀಯ ವೈದ್ಯರುಗಳ ಒಕ್ಕೂಟದ ಅಧ್ಯಕ್ಷ ದಯಾನಂದ್ ಸಾಗರ್ ಮಾತನಾಡಿ, ಸೈಪಂಡ್ ವಿಚಾರದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿಗಳಿಂದ ತಮಗೆ ಭರವಸೆ ಸಿಕ್ಕಿದ್ದು, ಬೇರೆ ಯಾವ ಬೇಡಿಕೆಗಳಿಗೂ ಮನ್ನಣೆ ಸಿಕ್ಕಿಲ್ಲ ಎಂದಿದ್ದಾರೆ.
ಕೋವಿಡ್-19 ಸೇವೆಗೆ ತಮ್ಮನ್ನು ಅಗ್ಗದ ಕಾರ್ಮಿಕರಾಗಿ ಪರಿಗಣಿಸಿದ್ದಾರೆ ಎನಿಸುತ್ತಿದ್ದು, ತಮ್ಮ ಕೈಯಿಂದ ದೀರ್ಘ ಸಮಯದವರೆಗೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ.
ನಮ್ಮ ಸೇವೆಯನ್ನು ಪರಿಗಣಿಸಿ ವಿಶೇಷ ಗೌರವ ನೀಡುವುದು ಯಾವಾಗ ಎಂದು ವೈದ್ಯರು ಪ್ರಶ್ನಿಸುತ್ತಾರೆ.
PublicNext
11/12/2020 10:17 am