ಲಕ್ನೋ: ಶೌಚಾಲಯದಲ್ಲಿ ಬೇಯಿಸಿದ ಆಹಾರವನ್ನು ಕ್ರೀಡಾಪಟುಗಳಿಗೆ ನೀಡಿರುವ ಘಟನೆ ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ.
17 ವರ್ಷದೊಳಗಿನ ಬಾಲಕಿಯರಿಗೆ ಕಬಡ್ಡಿ ಟೂರ್ನಾಮೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಎಲ್ಲ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಇಡಲಾಗಿದ್ದ ಊಟ ನೀಡಲಾಗಿದೆ. ಈ ಊಟ ಅತ್ಯಂತ ಕಳಪೆ ಆಗಿತ್ತು ಎಂದು ಆಟಗಾರ್ತಿಯರು ದೂರಿದ್ದಾರೆ. ಆದರೆ ಸಹರಾನ್‌ಪುರ ಕ್ರೀಡಾ ಅಧಿಕಾರಿ ಈ ಆರೋಪವನ್ನು ಅಲ್ಲಗೆಳೆದಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೆ ಗುಣಮಟ್ಟದ ಆಹಾರ ಒದಗಿಸಲಾಗಿದೆ. ಆದರೆ ಅಡುಗೆ ತಯಾರಿಸಲು ಜಾಗ ಇಲ್ಲದ ಕಾರಣ ಶೌಚಾಲಯ ಪಕ್ಕದಲ್ಲಿ ತಯಾರಿಸಲಾಗಿತು ಎಂದಿದ್ದಾರೆ.
PublicNext
20/09/2022 07:57 pm