ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಟೆಗೆ 183 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಚಾಲನೆ; ಲೋಟದಲ್ಲಿ ತುಂಬಿಟ್ಟಿದ್ದ ನೀರು ಏನಾಯ್ತು ನೋಡಿ!

ನವದೆಹಲಿ: ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಸ್ಥಿರತೆಯನ್ನು ಪರೀಕ್ಷೆ ಮಾಡಿರುವ ವಿಡಿಯೋ ಒಂದನ್ನು ಸದರನ್​ ರೈಲ್ವೆ ತನ್ನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಒಂದು ಗ್ಲಾಸ್​ನಲ್ಲಿ ಅದರ ತುದಿಯವರೆಗೂ ನೀರು ತುಂಬಿ, ಸೀಟ್​ ಮೇಲಿಟ್ಟು ಅದರ ಪಕ್ಕದಲ್ಲಿ ಸ್ಪೀಡ್​ ಟ್ರ್ಯಾಕರ್​ ಇಡಲಾಗಿದೆ. ರೈಲು ಗಂಟೆಗೆ 180 ರಿಂದ 183 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದರೂ ಗ್ಲಾಸ್​ನಲ್ಲಿದ್ದ ನೀರು ಅಲುಗಾಡಿತು ಹೊರತು ಒಂದೇ ಒಂದು ಹನಿ ನೀರು ಹೊರಗೆ ಚೆಲ್ಲಲಿಲ್ಲ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, 16 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ವಂದೇ ಭಾರತ್​ ಎಕ್ಸ್​ಪ್ರೆಸ್​ನಲ್ಲಿ ಒಮ್ಮೆ ಪ್ರಯಾಣದ ಅನುಭವ ಪಡೆಯಬೇಕೆಂದು ಬಯಸಿದ್ದಾರೆ.

ಇನ್ನು ವಂದೇ ಭಾರತ್​ ಎಕ್ಸ್​ಪ್ರೆಸ್​ ಭಾರತೀಯ ರೈಲ್ವೆ ನಡೆಸುವ ಸ್ವಯಂ ಚಾಲಿತ ಇಎಮ್​ಯು ಸಾರಿಗೆಯಾಗಿದೆ. ಇದನ್ನು ಮೇಕ್ ಇನ್ ಇಂಡಿಯಾ ಅಭಿಯಾನದ ಬ್ಯಾನರ್ ಅಡಿಯಲ್ಲಿ ಚೆನ್ನೈನ ಪೆರಂಬೂರ್‌ನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ.

ಸದ್ಯ ಎರಡು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ದೆಹಲಿ, ವಾರಾಣಸಿ ಮತ್ತು ಕರ್ತಾ ನಡುವೆ ಸಂಚರಿಸುತ್ತಿವೆ. ಶೀರ್ಘದಲ್ಲೇ ಮುಂಬೈ-ಅಹಮದಬಾದ್​ನಲ್ಲಿ ಸಂಚಾರ ಆರಂಭ ಮಾಡಲಿದೆ.

Edited By : Abhishek Kamoji
PublicNext

PublicNext

07/09/2022 07:47 pm

Cinque Terre

54.26 K

Cinque Terre

5