ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪಬ್ಲಿಕ್ ನೆಕ್ಸ್ಟ ವರದಿಗೆ ಎಚ್ಚೆತ್ತಕೊಂಡ ಅಧಿಕಾರಿಗಳು.

ಗದಗ: ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಲವು ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಕರ್ಯದಿಂದ ವಂಚಿತ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ ಆಗಸ್ಟ್ 20 ರಂದು ಸೌಕರ್ಯ ವಂಚಿತ 18 ಅಂಗನವಾಡಿಗಳು ಎಂಬ ಶಿರೋನಾಮೆಯೊಂದಿಗೆ ವರದಿ ಮಾಡಲಾಗಿದ್ದು, ಈ ವರದಿಯಿಂದ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ದೇವಸ್ಥಾನದಲ್ಲಿರುವ ಅಂಗನವಾಡಿಗಳನ್ನು ಬಾಡಿಗೆ ಕಟ್ಟಡಗಳಿಗೆ ಸ್ಥಳಾಂತರ ಮಾಡಿ ಮೂಲಸೌಕರ್ಯ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಡಿಪಿಓ ಮೃತ್ಯುಂಜಯ ಗುಡ್ಡದ ಅನೆವೇರಿ ಅವರು ಪಬ್ಲಿಕ್ ನೆಕ್ಸ್ಟ ವರದಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿರುವ ಅಂಗನವಾಡಿಗಳನ್ನು ಬಾಡಿಗೆ ಕಟ್ಟಡದಲ್ಲಿ ಸ್ಥಳಾಂತರ ಮಾಡಲಾಗಿದ್ದು, ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಿವೇಶನ ನೀಡಲು ಪುರಸಭೆಗೆ ಮನವಿ ಮಾಡಲಾಗಿದ್ದು, ನಿವೇಶನ ನೀಡಿದ ಕೂಡಲೇ ಸರ್ಕಾರದಿಂದ ಅನುದಾನ ಪಡೆದು ಅಂಗನವಾಡಿಗಳನ್ನು ಹಂತ ಹಂತವಾಗಿ ನಿರ್ಮಾಣ ಮಾಡಲಾಗುವುದು. ಎಂದು ಪಬ್ಲಿಕ್ ನೆಕ್ಸ್ಟಗೆ ಹೇಳಿದ್ದಾರೆ.

Edited By :
PublicNext

PublicNext

30/08/2022 09:08 pm

Cinque Terre

46.56 K

Cinque Terre

1

ಸಂಬಂಧಿತ ಸುದ್ದಿ