ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಅತಿ ಉದ್ದದ ಗೂಡ್ಸ್ ರೈಲು ‘ಸೂಪರ್ ವಾಸುಕಿ’ ಸಂಚಾರ ಯಶಸ್ವಿ

ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ಭಾರತವು ಅತಿ ಉದ್ದ ಮತ್ತು ಅತಿಹೆಚ್ಚು ಭಾರ ಎಳೆಯವ ಗೂಡ್ಸ್ ಟ್ರೇನ್ ನ್ನು ಲಾಂಚ್ ಮಾಡಿ ರೈಲ್ವೆ ಇಲಾಖೆ ಹೊಸ ದಾಖಲೆ ಬರೆದಿದೆ.3.5 ಕಿ.ಮೀ.ನಷ್ಟು ಉದ್ದನೆಯ ಸರಕು ಸಾಗಣೆ ರೈಲು ‘ಸೂಪರ್ ವಾಸುಕಿ’ಯ ಪ್ರಾಯೋಗಿಕ ಸಂಚಾರವನ್ನು ರೈಲ್ವೆ ಇಲಾಖೆ ಯಶಸ್ವಿಯಾಗಿ ನಡೆಸಿದೆ.

ಈ ರೈಲಿನಲ್ಲಿ ಸರಕು ಭರ್ತಿಯಾದ 295 ವ್ಯಾಗನ್ ಗಳು ಇದ್ದು, ಒಟ್ಟಾರೆ 27,000 ಟನ್ ಕಲ್ಲಿದ್ದಲು ಸಾಗಣೆ ಮಾಡಿತು. ಈ ರೈಲಿಗೆ ಐದು ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. ರೈಲು ಛತ್ತೀಸಗಡದಲ್ಲಿ ಭಿಲಾಯಿಯಿಂದ ಕೊರ್ಬಾಗೆ ಸಂಚರಿಸಿದ್ದು, ನಿಲ್ದಾಣದಿಂದ ನಿರ್ಗಮಿಸಲು 4 ನಿಮಿಷ ತೆಗೆದುಕೊಂಡಿತು.

ಬಿಲಾಸ್ ಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಗ್ನೇಯ ಕೇಂದ್ರ ರೈಲ್ವೆಯು ಇದರ ನಿರ್ವಹಣೆ ಮಾಡಲಿದೆ. ರೈಲ್ವೆ ಇಲಾಖೆಯು ಹೀಗೇ ಒಂದೇ ರೈಲಿನಲ್ಲಿ ಅತ್ಯಧಿಕ ಪ್ರಮಾಣ, ತೂಕದ ಇಂಧನ ಸಾಗಣೆ ಮಾಡಿರುವುದು ದಾಖಲೆಯಾಗಿದೆ ಎಂದು ರೈಲ್ವೆ ಇಲಾಖೆಯ ಹೇಳಿಕೆಯಲ್ಲಿ ತಿಳಿಸಿದೆ.

Edited By : Nirmala Aralikatti
PublicNext

PublicNext

17/08/2022 06:11 pm

Cinque Terre

72.83 K

Cinque Terre

1

ಸಂಬಂಧಿತ ಸುದ್ದಿ