ತುಮಕೂರು: ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ತುಮಕೂರಿನಲ್ಲಿ ಸುರಿದ ಭಾರಿ ಮಳೆಯಿಂದ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳು ಬೆಳಕಿಗೆ ಬರುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಮಂಡಿಪೇಟೆ ಮುಖ್ಯರಸ್ತೆಯಲ್ಲಿ ಗುಂಡಿ ಬಿದ್ದಿತ್ತು. ಇದೀಗ ಕುಣಿಗಲ್ ರಸ್ತೆಯ ಸದಾಶಿವನಗರದ ಹೇಮಾವತಿ ಕಚೇರಿ ಮುಂಭಾದ ಹಠಾತ್ತನೆ ರಸ್ತೆ ಕುಸಿದು 10 ಅಡಿಗೂ ಹೆಚ್ಚು ಆಳದ ಗುಂಡಿ ಬಿದ್ದು ವಾಹನ ಸವಾರರ ಬಲಿಗಾಗಿ ಯಮಸ್ವರೂಪಿಯಾಗಿ ಕಾದು ಕುಳಿತಿದೆ.
ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿ ಈ ರೀತಿ ಗುಂಡಿ ಬೀಳುತ್ತಿರುವುದು ವಾಹನ ಸವಾರರನ್ನು ಆತಂಕಕ್ಕೆಡೆಮಾಡಿದೆ, ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿಸಿ ಸ್ಮಾರ್ಟ್ ಲೂಟಿ ಮಾಡುತ್ತಿದ್ದಾರೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ತುಮಕೂರಿನ ಪ್ರಜ್ಙಾವಂತರ ಆಗ್ರಹವಾಗಿದೆ.
PublicNext
12/08/2022 08:33 pm