ಕೊರಟಗೆರೆ:- ಪಟ್ಟಣದ ಗೋಕುಲದ ಕೆರೆ ರಾಜಕಾಲುವೆ ಇಂದು ಉಕ್ಕಿಹರಿದ ಪರಿಣಾಮ ಸಂಪೂರ್ಣ ಜಲಾವೃತಗೊಂಡಿದೆ. ಕಾರ್ಪೊರೇಷನ್ ಬ್ಯಾಂಕ್, ಪಾವಗಡ ಬ್ಯಾಂಕ್, ಸಂಜೀವಿನಿ ಇಂಡಿಯನ್ ಗ್ಯಾಸ್, ಸೆವೆನ್ ಸಿಸ್ ಶುದ್ಧ ನೀರಿನ ಘಟಕ ಸೇರಿದಂತೆ ವಿನಾಯಕ ನಗರ, ಬಡಾವಣೆಗೆ ಸಂಪರ್ಕಿಸು ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕೆಲವು ಬಡಾವಣೆಯ ಮನೆಗೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದಾರೆ.
ಕೆಲವು ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿರುವ ಹಿನ್ನೆಲೆ ನೀರು ಸರಾಗವಾಗಿ ಈ ಅವಾಂತರ ಸೃಷ್ಟಿಯಾಗಿದ್ದು, ಸಣ್ಣ ನೀರಾವರಿ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ, ಇತ್ತಕಡೆ ಗಮನ ಹರಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆಯನ್ನು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
PublicNext
03/08/2022 12:34 pm