ನವದೆಹಲಿ: ವಂದೇ ಭಾರತ್ ಎಕ್ಸಪ್ರೆಸ್ ರೈಲಿನಲ್ಲಿ ಸುಧಾರಿತ ಆಸನಗಳನ್ನ ಅಳವಡಿಸೋದಾಗಿ ಟಾಟಾ ಸ್ಟೀಲ್ಸ್ ಈಗ ಹೇಳಿಕೊಂಡಿದೆ.
ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳಿಗೆ 16 ಬೋಗಿಗಳು ಇರುತ್ತವೆ. ಅವುಗಳಲ್ಲಿ ಒಟ್ಟು 22 ರೈಲುಗಳಿಗೆ ಸುಧಾರಿತ ಆಸನಗಳನ್ನ ಅಳವಡಿಸಲಾಗುವುದು ಅಂತಲೇ ಟಾಟಾ ಸ್ಟೀಲ್ಸ್ ವಿವರಿಸಿದೆ.
ಟಾಟಾ ಸ್ಟೀಲ್ಸ್ ನ ಸಂಯೋಜಿತ ವಿಭಾಗವು ಈ ಹಿನ್ನೆಲೆಯಲ್ಲಿಯೇ 145 ಕೋಟಿ ರೂ.ಆರ್ಡರ್ ಪಡೆದುಕೊಂಡಿದ್ದು, 180 ಡಿಗ್ರಿ ಸುತ್ತುವ ಆಸನಗಳನ್ನ ವಂದೇ ಭಾರತ್ ಎಕ್ಸಪ್ರೆಸ್‌ನಲ್ಲಿ ಅಳವಡಿಸಲು ಪ್ಲಾನ್ ಮಾಡಿದೆ.
ದೇಶದಲ್ಲಿ ಇದೇ ಮೊದಲು ಅನ್ನೋದೇ ವಿಶೇಷ. ಈ ಬೋಗಿಗಳಲ್ಲಿ ವಿಮಾನದಂತಹ ಸೌಲಭ್ಯ ಇರೋದು ಮತ್ತೊಂದು ವಿಶೇಷ.
PublicNext
01/08/2022 01:41 pm