ಪಾವಗಡ: ಪಳವಳ್ಳಿ ಕಟ್ಟೆ ಮೇಲೆ ಬಸ್ ಅಪಘಾತವಾಗಿ ಕೆಲವು ತಿಂಗಳುಗಳ ಹಿಂದೆ 8 ವಿದ್ಯಾರ್ಥಿಗಳು ಸಾವನ್ನಪ್ಪಿ ರಾಜ್ಯಾದಂತ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.
ಅಪಘಾತವಾದ ರಸ್ತೆ ಬದಿಯ ಡಿವೈಡರ್ ಗಳನ್ನು ಸರಿಪಡಿಸುವಂತೆ ತಾಲ್ಲೂಕು ಆಡಳಿತ, ಜಿಲ್ಲಾಧಿಕಾರಿಗಳಲ್ಲಿ ಸಾರ್ವಜನಿಕರು ಮತ್ತು ಹಲವು ಸಂಘಟನೆಗಳು ರಸ್ತೆ ದುರಸ್ತಿ ಬಗ್ಗೆ ಮನವಿ ಮಾಡಿದ್ದರು.
ಸದ್ಯ ಅಧಿಕಾರಿಗಳು ಅಪಘಾತವಾಗುವ ರಸ್ತೆಯನ್ನು ಸರಿಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪಾವಗಡ ತಾಲ್ಲೂಕು ಜನತೆಯ ಕೃತಜ್ಞತೆ ಸಲ್ಲಿಸಿದ್ದಾರೆ.
ಜೊತೆಗೆ ಪಾವಗಡ ತಾಲೂಕಿನ ಎಲ್ಲ ರಸ್ತೆಗಳನ್ನು ಸುರಕ್ಷಿತ ರಸ್ತೆಗಳನ್ನಾಗಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
PublicNext
19/07/2022 03:01 pm