ಬಜಪೆ: ವಿದ್ಯುತ್ ಕಂಬದ ತೆರವಿನ ವೇಳೆ ಮರವೂರು ಸೇತುವೆಯ ಬಳಿ ಮಣ್ಣು ಕುಸಿತ ಉಂಟಾಗಿ ಬೃಹತ್ ಗಾತ್ರದ ಹೊಂಡವೊಂದು ನಿನ್ನೆ ಉಂಟಾಗಿತ್ತು.ಇದರಿಂದಾಗಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.
ಮಣ್ಣು ಕುಸಿತದಿಂದಾಗಿ ಉಂಟಾದ ಹೊಂಡವನ್ನು ಕೂಡಲೇ ತುರ್ತು ಕಾಮಗಾರಿ ನಡೆಸಿ ಮುಚ್ಚಲಾಗಿದೆ. ತುರ್ತು ಕಾಮಗಾರಿಯ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನದ ತನಕ ಏಕಮುಖ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳಕ್ಕೆ ಬಜಪೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ ಅವರು ಭೇಟಿ ನೀಡಿದ್ದಾರೆ.
PublicNext
01/07/2022 03:30 pm