ಬೆಂಗಳೂರು: ಸಿಲಿಕಾನ್ ಸಿಟಿಯ ಹೋಟೆಲ್ ಮತ್ತು ರೆಸ್ಟೋರೆಂಟ್, ಐಸ್ ಕ್ರಿಮ್ ಶಾಪ್, ಸ್ವೀಟ್ ಸ್ಟಾಲ್,ಬೇಕರಿ ಗಳು ಇನ್ಮುಂದೆ ದಿನದ 24 ಗಂಟೆನೂ ಓಪನ್ ಆಗಿರುತ್ತದೆ. ರಾತ್ರಿ ಪಾಳಿ ಉದ್ಯೋಗಿಗಳು ಇನ್ಮುಂದೆ ಟೆನ್ಷನ್ ಮಾಡಿಕೊಳ್ಳಲೇಬೇಕಿಲ್ಲ.
ಹೌದು. ರಾತ್ರಿ ಕೂಡ ರಾಜಧಾನಿ ಓಪನ್ ಇಡೋ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗ ಹೊಸ ಅಧಿಸೂಚನೆ ಹೊರಡಿಸಿದೆ.
ನಿಜ, ರಾತ್ರಿ ಪಾಳಿಯದಲ್ಲಿ ಕೆಲಸ ಮಾಡೋರಿಗೆ ಊಟ-ತಿಂಡಿಯ ತೊಂದರೆ ಆಗುತ್ತದೆ. ಅವರಿಗೆ ಅನುಕೂಲ ಆಗಲೆಂದೇ,ಬೆಂಗಳೂರಿನ ನಿರ್ದಿಷ್ಟ ಪ್ರದೇಶದಲ್ಲಿ ದಿನದ 24 ಗಂಟೆ ಹೋಟೆಲ್,ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ.
ಮೆಜೆಸ್ಟಿಕ್,ಶಾಂತಿನಗರ,ಸ್ಯಾಟಲೈಟ್ ಬಸ್ ನಿಲ್ದಾಣ,ರೈಲ್ವೆ ಸ್ಟೇಷನ್, ಪ್ರಮುಖ ಬಸ್ ನಿಲ್ದಾಣದಲ್ಲಿ ಮಾತ್ರ 24 ಗಂಟೆ ಮಾತ್ರ ಹೋಟೆಲ್-ರೆಸ್ಟೋರೆಂಟ್ ತೆರೆಯಲು ಅವಕಾಶ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಜಾಗದ ಹೊರತಾಗಿ ಬೇರೆಯಲ್ಲೂ ಹೋಟೆಲ್ -ರೆಸ್ಟೋರೆಂಟ್ ತೆರೆಯಲು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟೇ ಇಲ್ಲ.
PublicNext
29/06/2022 04:38 pm