ಬೆಂಗಳೂರು: ರಾಜ್ಯದ ಮೊದಲ "ಭಾರತ್ ಗೌರವ್ ರೈಲು" ಇದೇ ಆಗಸ್ಟ್ ಮೊದಲ ವಾರದಿಂದಲೇ ಪ್ರಯಾಣ ಬೆಳೆಸುತ್ತಿದೆ. ಧಾರ್ಮಿಕ ದತ್ತಿ ಇಲಾಖೆ ಮಾಲೀಕತ್ವದ ಈ ರೈಲು ಕಾಶಿಯಾತ್ರೆ ಕೈಗೊಳ್ಳುವವರ ಕನಸನನ್ನ ನನಸು ಮಾಡಲಿದೆ.
ಈ ರೈಲು ಬೆಂಗಳೂರಿನಿಂದ ಕಾಶಿ ವರೆಗೂ ಸಂಚರಿಸುತ್ತಿದ್ದು, ಕಡಿಮೆ ಖರ್ಚುನಲ್ಲಿ ರಾಜ್ಯ ಸರ್ಕಾರದ ಸಹಾಯಧನದಲ್ಲಿಯೇ ಈ ಪ್ರಯಾಣದ ವ್ಯವಸ್ಥೆ ಆಗುತ್ತಿದೆ.
ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಕಾಶಿಯಾತ್ರೆ ತೆರಳುವ ಯಾತ್ರಿಗಳಿಗೆ ತಲಾ 5 ಸಾವಿರ ಘೋಷಿಸಿದೆ. ಈ ಹಿನ್ನೆಲೆಯಲ್ಲಿಯೆ ಧಾರ್ಮಿಕ ದತ್ತಿ ಇಲಾಖೆ ಕೇಂದ್ರ ಸರ್ಕಾರದ ಭಾರತ ಗೌರವ್ ರೈಲು ಯೋಜನೆಯನ್ನ ಬಳಸಿಕೊಂಡು ಕಾಶಿಯಾತ್ರೆ ಅನುಷ್ಠಾನಕ್ಕೆ ನಿರ್ಧಾರ ಮಾಡಿದೆ.
ಈಗಾಗಲೇ ಎರಡೂ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ಮಾಡಿದ್ದಾರೆ. ಆಗಸ್ಟ್ ಮೊದಲ ವಾರದಿಂದಲೇ ಭಾರತ್ ಗೌರವ್ ರೈಲು ತನ್ನ ಪ್ರಯಾಣ ಆರಂಭಿಸಲಿದೆ.
PublicNext
03/06/2022 11:26 am