ಬೆಂಗಳೂರು: ಕೋವಿಡ್ ನಿಂದ ಕಳೆದ ಮೂರು ವರ್ಷದಿಂದಲೂ ನೆರೆ ರಾಜ್ಯಕ್ಕೆ ಕೆಎಸ್‌ಆರ್‌ಟಿಸಿ ತನ್ನ 800 ಪ್ರಿಮಿಯಂ ಬಸ್‌ಗಳನ್ನ ಓಡಿಸೋದನ್ನೆ ನಿಲ್ಲಿಸತ್ತು. ಆದರೆ, ಇದೇ ಬುಧವಾರ ರಾತ್ರಿಯಿಂದಲೇ ಈ ಎಲ್ಲ ಬಸ್‌ಗಳು ಆರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಬೇಸಿಗೆ ರಜೆ ಶುರು ಆಗಿದೆ. ಕೋವಿಡ್ ಕುಸಿದು ಹೋಗಿದೆ. ಈ ಕಾರಣಕ್ಕೇನೆ ಕೆಎಸ್‌ಆರ್‌ಟಿಸಿ 800 ಪ್ರಿಮಿಯಂ ಬಸ್‌ಗಳನ್ನ ಓಡಿಸಲು ನಿರ್ಧರಿಸಿದೆ.
ಏಪ್ರಿಲ್-14 ಮತ್ತು 17 ರ ನಡುವೆ ಬೆಂಗಳೂರಿನಿಂದ ಇತರ ನಗರಗಳಿಗೆ 200 ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PublicNext
14/04/2022 05:02 pm