ದೆಹಲಿ:ಭಾರತೀಯ ವಿಮಾನ ಮತ್ತು ವಿಮಾನ ನಿಲ್ದಾಣದಲ್ಲಿ ಭಾರತೀಯ ಹಾಡುಗಳನ್ನೇ ಪ್ಲೇ ಮಾಡಬೇಕು ಅನ್ನೋದೇನೂ ಇಲ್ಲ. ಇದು ಕಡ್ಡಾಯವೂ ಅಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಭಾರತೀಯ ಹಾಡುಗಳನ್ನೇ ಹಚ್ಚಬೇಕು ಎಂದು ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಷನ್ಸ್ ಮನವಿ ಮಾಡಿತ್ತು. ಡಿಸೆಂಬರ್ 23 ರಂದು ಈ ಕುರಿತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೇಳಿಕೊಂಡಿತ್ತು.
ವಿಮಾನಯಾನ ಸಚಿವಾಲಯವು ಡಿಸೆಂಬರ್-27 ಎಲ್ಲ ವಿಮಾನ ಸಂಸ್ಥೆಗಳಿಗೂ ಭಾರತೀಯ ಸಂಗೀತವನ್ನೇ ಪ್ಲೇ ಮಾಡಬೇಕು ಎಂದು ಸೂಚಿಸಿತ್ತು. ಈ ಬಗ್ಗೆ ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಶ್ನೆ ಕೇಳಿತ್ತು. ರಾಜ್ಯ ವಿಮಾನಯಾನ ಸಚಿವ ವಿ.ಕೆ.ಸಿಂಗ್ ಮಾತನಾಡಿ, ಈ ವಿಚಾರವಾಗಿ ಆದ್ಯತೆ ನೀಡಿ ಅಂತಲೇ ಹೇಳಿದ್ದೇವೆ. ಆದರೆ ಇದನ್ನ ಕಡ್ಡಾಯಗೊಳಿಸಿಲ್ಲ ಅಂತಲೇ ಹೇಳಿದ್ದಾರೆ.
PublicNext
16/03/2022 03:29 pm