ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲಿನಲ್ಲಿ ಹೊದಿಕೆ, ಪರದೆ ವಿತರಣೆಗೆ ವಿಧಿಸಿದ್ದ ನಿರ್ಬಂಧ ತೆರವು

ನವದೆಹಲಿ: ಕೊರೊನಾ ಸಾಂಕ್ರಾಮಿಕದ ತೀವ್ರತೆ ಹೆಚ್ಚಾಗಿದ್ದ ವೇಳೆ, ರೈಲುಗಳಲ್ಲಿ ಲೈನನ್ ಹೊದಿಕೆಗಳು ಹಾಗೂ ಪರದೆಗಳ ವಿತರಣೆಗೆ ನಿರ್ಬಂಧ ಹೇರಲಾಗಿತ್ತು. ಸದ್ಯ ಇಂದಿನಿಂದ ತತ್ಕ್ಷಣಕ್ಕೆ ಜಾರಿಯಾಗುವಂತೆ ಈ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.

ಈ ಬಗ್ಗೆ ಭಾರತೀಯ ರೈಲ್ವೇ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕೋವಿಡ್ ನಿಯಮಾವಳ ಪ್ರಕಾರ ಇಲ್ಲಿಯವರೆಗೆ ರೈಲುಗಳಲ್ಲಿ ಹೊದಿಕೆಗಳು ಹಾಗೂ ಪರದೆ ವಿತರಣೆ ಬಂದ್ ಮಾಡಲಾಗಿತ್ತು. ಇನ್ಮುಂದೆ ಪ್ರಯಾಣಿಕರಿಗೆ ಲೈನನ್ ಹೊದಿಕೆಗಳು ಹಾಗೂ ಪರದೆ ವಿತರಿಸಲು ಅನುಮತಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Edited By : Nagaraj Tulugeri
PublicNext

PublicNext

10/03/2022 09:52 pm

Cinque Terre

39.24 K

Cinque Terre

0

ಸಂಬಂಧಿತ ಸುದ್ದಿ