ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಂಟಿಸಿಗೆ ಬರಲಿವೆ 565 ಪರಿಸರ ಸ್ನೇಹಿ ಬಸ್

ಬೆಂಗಳೂರು:ಬಿಎಂಟಿಸಿ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಅತೀ ಶೀಘ್ರದಲ್ಲಿಯೇ ಪರಿಸರ ಸ್ನೇಹಿ ಬಿಎಸ್ VI ವಾಹನಗಳನ್ನ ಬಿಎಂಟಿಸಿ ಖರೀದಿಸಲಿದೆ.ಮುಂದಿನ ವರ್ಷ ಫೆಬ್ರವರಿ 2022 ರ ಒಳಗಾಗಿಯೆ ಅಶೋಕ್ ಲೈಲ್ಯಾಂಡ್ ಕಂಪನಿಯ 565 ಬಸ್ಸುಗಳು ಬಿಎಂಟಿಸಿಗೆ ಸೇರ್ಪಡೆ ಆಗಲಿವೆ.

ಬಿಎಂಟಿಸಿ ಸೇರಲಿರೋ ಪರಿಸರ ಸ್ನೇಹಿ ಬಸ್ಸುಗಳು ವಿಶೇಷವಾಗಿಯೇ ಇವೆ. ಈ ಬಿಎಸ್ VI ವಾಹನಗಳು ಹೆಚ್ಚಿನ ಸಾಮರ್ಥ್ಯ ಹೊಂದಿವೆ.ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಕೂಡ ಈ ಬಸ್ ನಲ್ಲಿದೆ. ಪರಿಸರ ಸ್ನೇಹಿ ಈ ಬಸ್ಸು ಗಾಳಿಯ ಗುಣಮಟ್ಟವನ್ನ ಸುಧಾರಿಸುತ್ತದೆ. ವಾತಾವರಣದ ಮಾಲಿನ್ಯವನ್ನೂ ಕಡಿಮೆ ಕೊಳಿಸುತ್ತದೆ.

ಬಿಎಂಟಿಸಿ ಅಧಿಕಾರಿಗಳು ಈಗಾಗಲೇ ಬಿಎಸ್ VI ಬಸ್ಸುಗಳ ಮಾದರಿಯನ್ನ ವೀಕ್ಷಿಸಿದ್ದಾರೆ.ಈ ಬಸ್ಸುಗಳನ್ನು 2017-18 ರಲ್ಲಿ ಬಸ್ಸುಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ.

Edited By :
PublicNext

PublicNext

13/11/2021 03:46 pm

Cinque Terre

17.9 K

Cinque Terre

0

ಸಂಬಂಧಿತ ಸುದ್ದಿ