ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಮೆಟ್ರೋ 3ನೇ ಹಂತ: ವ್ಯಾಪ್ತಿ, ನಿಲ್ದಾಣಗಳ ವಿವರ ಇಲ್ಲಿದೆ ನೋಡಿ

ಬೆಂಗಳೂರು: ನಮ್ಮ ಮೆಟ್ರೋ ಹಂತ 1, 2 ಈಗಾಗಲೇ ಸುಗಮವಾಗಿ ಸಂಚರಿಸುತ್ತಿದೆ. ಇನ್ನು 3ನೇ ಹಂತದ ಯೋಜನೆಯನ್ನು ಅಂತಿಮಗೊಳಿಸಲಾಗಿದೆ.

42 ಕಿ.ಮೀ ಉದ್ದದ ಯೋಜನೆ ಇದಾಗಿರಲಿದೆ. ಈ ಯೋಜನೆಯಲ್ಲಿ ಉಪನಗರ ರೈಲು, ಬಸ್‌ ಡಿಪೋಗಳು ಸೇರಿದಂತೆ 9 ಕಡೆಗಳಲ್ಲಿ ಸಂಪರ್ಕ ಕಲ್ಪಿಸುತ್ತದೆ. ಇದು ತಡೆ ರಹಿತ ಸಂಪರ್ಕಕ್ಕೆ ಸಹಾಯ ಮಾಡುತ್ತದೆ. ಯೋಜನೆಯು 2027-28ಕ್ಕೆ ಕಾರ್ಯಾರಂಭಗೊಳ್ಳಲಿದೆ.

22 ನಿಲ್ದಾಣಗಳು: ಹಂತ-3 ಎರಡು ಮೆಟ್ರೋ ಕಾರಿಡಾರ್‌ಗಳನ್ನು ಹೊಂದಿರುತ್ತದೆ. ಕಾರಿಡಾರ್– 1 ಹೊರವರ್ತುಲ ರಸ್ತೆಯಲ್ಲಿ ಜೆಪಿ ನಗರದಿಂದ ಹೆಬ್ಬಾಳದವರೆಗೆ 31 ಕಿ.ಮೀ ಸಾಗಲಿದೆ ಮತ್ತು ಕಾರಿಡಾರ್-2 ಹೊಸಹಳ್ಳಿ ಟೋಲ್‍ನಿಂದ ಕಡಬಗೆರೆವರೆಗೆ 11 ಕಿ.ಮೀ. ಸಾಗಲಿದೆ. ಇನ್ನು ಹೊರ ವರ್ತುಲ ರಸ್ತೆ (ORR) ಉದ್ದಕ್ಕೂ ಇರುವ ಮಾರ್ಗವು ಜೆಪಿ ನಗರದಲ್ಲಿ ಮೂರು ಸೇರಿದಂತೆ 22 ನಿಲ್ದಾಣಗಳನ್ನು ಹೊಂದಿರುತ್ತದೆ ಮತ್ತು ಎರಡನೇ ಸಾಲಿನಲ್ಲಿ ಒಂಬತ್ತು ನಿಲ್ದಾಣಗಳಿವೆ. ಸೋಮನಹಳ್ಳಿ ಕ್ರಾಸ್ ಇಂಟರ್ ಚೇಂಜ್ ನಿಲ್ದಾಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.

ಹೆಬ್ಬಾಳದಲ್ಲಿ ಕೊನೆಗೊಳ್ಳುವ ಮೊದಲ ಕಾರಿಡಾರ್ ಏರ್‌ಪೋರ್ಟ್ ಲೈನ್‍ನ ಹಂತ-2 ಬಿಯೊಂದಿಗೆ ಭಾಗವಾಗುತ್ತದೆ. ಇದು ಕೆಆರ್ ಪುರಂನಿಂದ ಹೆಬ್ಬಾಳದ ಮೂಲಕ ಕೆಐಎಗೆ ಚಲಿಸುತ್ತದೆ. ಇದರಿಂದಾಗಿ ಓಆರ್‌ಆರ್‌ ರಸ್ತೆಯನ್ನು ಸಂಪೂರ್ಣವಾಗಿ ಸಂಪರ್ಕಿಸುತ್ತದೆ. ಮೆಟ್ರೋ 3ನೇ ಹಂತದಲ್ಲಿ ಸುಮನಹಳ್ಳಿ ಕ್ರಾಸ್‌ನಲ್ಲಿ ಒಂದೇ ಡಿಪೋ ಇರುತ್ತದೆ. ಮೆಟ್ರೋ ಹಂತ-3ರ ನಿರ್ಣಾಯಕ ಅಂಶವೆಂದರೆ ಈ 9 ಅಂಶಗಳು ಅದು ತನ್ನದೇ ಆದ ನೆಟ್‍ವರ್ಕ್‌ನೊಂದಿಗೆ ವಿಲೀನಗೊಳ್ಳುತ್ತದೆ ಅಥವಾ ಬಹು-ಮಾದರಿ ಏಕೀಕರಣವನ್ನು ಸುಗಮಗೊಳಿಸುತ್ತದೆ.

ನಿಲ್ದಾಣಗಳ ವಿವರ:

ಕಾರಿಡಾರ್ ಒಂದು: ಜೆಪಿ ನಗರ 4ನೇ ಹಂತ (ಜೆಡಿಮಾಲ್), ಜೆಪಿ ನಗರ 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್ ಡಿಪೋ, ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೈಸೂರು ರಸ್ತೆ, ನಾಗರಭಾವಿ ವೃತ್ತ, ವಿನಾಯಕ ಬಡಾವಣೆ

ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್: ಬಿಡಿಎ ಕಾಂಪ್ಲೆಕ್ಸ್, ಸುಮನಹಳ್ಳಿ ಕ್ರಾಸ್, ಚೌಡೇಶ್ವರಿ ನಗರ, ಸ್ವಾತಂತ್ರ್ಯ ಹೋರಾಟಗಾರರ ಕ್ರಾಸ್, ಕ್ರಾಂತಿವೀರ ಕ್ರೀಡಾಂಗಣ, ಪೀಣ್ಯ, ಬಾಹುಬಲಿ ನಗರ, ಬಿಇಎಲ್ ವೃತ್ತ, ಪಟೇಲಪ್ಪ ಬಡಾವಣೆ, ಹೆಬ್ಬಾಳ, ಕೆಂಪಾಪುರ.

ಕಾರಿಡಾರ್ ಎರಡು: ಹೊಸಹಳ್ಳಿ, ಕೆಎಚ್‍ಬಿ ಕಾಲೋನಿ, ವಿನಾಯಕ ನಗರ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಅರಣ್ಯ ಗೇಟ್, ಕಡಬಗೆರೆ.

Edited By : Vijay Kumar
PublicNext

PublicNext

27/10/2021 06:52 pm

Cinque Terre

31.06 K

Cinque Terre

3