ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ ನಿರ್ಮಾಣವಾಗುತ್ತಿದೆ 'ವಿಶ್ವದ ಉದ್ದದ ಹೆದ್ದಾರಿ'- ಈ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ವಿಶ್ವದ ಉದ್ದದ ಹೆದ್ದಾರಿಯಾಗಿ ತಲೆ ಎತ್ತಲಿರುವ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಪ್ರಗತಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಎರಡು ದಿನಗಳ ಮಟ್ಟಿಗೆ ಪರಿಶೀಲಿಸಿದ್ದಾರೆ. 1,380 ಕಿ.ಮೀ ಉದ್ದವಿರುವ ಈ ಹೆದ್ದಾರಿಯು ಜೀವರ್ ವಿಮಾನ ನಿಲ್ದಾಣವನ್ನು ಮುಂಬೈನ ಜವಾಹರಲಾಲ್ ನೆಹರೂ ಬಂದರಿನೊಂದಿಗೆ ಸಂಪರ್ಕಿಸುತ್ತದೆ.

ದೆಹಲಿ, ರಾಜಸ್ಥಾನ ಗುಜರಾತ್‌, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಹಾದು ಹೋಗಲಿರುವ ಹೆದ್ದಾರಿಯ ನಿರ್ಮಾಣಕ್ಕೆ 98,000 ಕೋಟಿ ರೂ.ಗಳು ಖರ್ಚಾಗಲಿದೆ. ಮಾರ್ಚ್ 2023ಕ್ಕೆ ನಿರ್ಮಾಣ ಕಾರ್ಯ ಮುಗಿಯಲಿದ್ದು, ಉಭಯ ನಗರಗಳ ನಡುವಿನ ಪ್ರಯಾಣದ ಅವಧಿಯು ಭಾರೀ ಇಳಿಕೆ ಕಾಣಲಿದೆ.

ಹೆದ್ದಾರಿಯ ವಿಶೇಷತೆ ಇಲ್ಲಿದೆ ನೋಡಿ:

* ಯೋಜನೆಯ ಪೂರ್ಣಗೊಂಡಲ್ಲಿ ವಾರ್ಷಿಕ 32 ಕೋಟಿ ಲೀಟರ್‌ ಇಂಧನ ಉಳಿತಾಯವಾಗಲಿದ್ದು, 85 ಕೋಟಿ ಕೆಜಿಗಳಷ್ಟು ಇಂಗಾಲದ ಹೊರಸೂಸುವಿಕೆ ತಗ್ಗಲಿದೆ.

* ಪ್ರಾಣಿಗಳಿಗೆಂದು ವಿಶೇಷವಾದ ಓವರ್‌ ಪಾಸ್‌ಗಳನ್ನು ಹೊಂದಿರುವ ಏಷ್ಯಾದ ಮೊದಲ ಹೆದ್ದಾರಿ ಇದಾಗಿರಲಿದೆ.

* ಎಂಟು ಪಥದ ಎರಡು ಸುರಂಗಗಳನ್ನು ಹೆದ್ದಾರಿ ಹೊಂದಲಿದೆ.

* ಎಂಟು ಪಥದ ಎಕ್ಸ್‌ಪ್ರೆಸ್‌ ವೇಯನ್ನು ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾದಂತೆ 12 ಪಥಗಳಿಗೆ ವಿಸ್ತರಣೆ ಮಾಡಬಹುದು.

* ಯೋಜನೆಗೆಂದು 12 ಲಕ್ಷ ಟನ್‌ಗಳಷ್ಟು ಉಕ್ಕು ಬಳಸಲಾಗಿದೆ. ಇದೇ ವೇಳೆ 80 ಲಕ್ಷ ಟನ್‌ಗಳಷ್ಟು ಕಾಂಕ್ರೀಟ್ ಬಳಸಲಾಗಿದೆ. ಇದು ದೇಶದಲ್ಲಿ ಉತ್ಪತ್ತಿಯಾಗುವ ಸಿಮೆಂಟ್‌ನ ವಾರ್ಷಿಕ ಪ್ರಮಾಣದ 2%ನಷ್ಟಾಗಿದೆ.

* ರೆಸಾರ್ಟ್‌ಗಳು, ಫುಡ್‌ಕೋರ್ಟ್‌ಗಳು, ರೆಸ್ಟೋರೆಂಟ್‌ಗಳು, ಇಂಧನ ನಿಲ್ದಾಣಗಳು, ಲಾಜಿಸ್ಟಿಕ್ಸ್ ಪಾರ್ಕ್‌ಗಳು ಹಾಗೂ ಲಾರಿಗಳಿಗೆ ವಿಶೇಷ ಸೌಲಭ್ಯಗಳನ್ನು ಈ ಹೆದ್ದಾರಿ ಒಳಗೊಳ್ಳಲಿದೆ.

* ಅಪಘಾತಕ್ಕೆ ತುತ್ತಾಗುವ ಸಂತ್ರಸ್ತರನ್ನು ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲು ಹೆಲಿಕಾಪ್ಟರ್‌ ಆಂಬುಲೆನ್ಸ್‌ ವ್ಯವಸ್ಥೆ ಒದಗಿಸಲು ಹೆಲಿಪೋರ್ಟ್‌ಗಳನ್ನು ನಿರ್ಮಿಸಲಾಗುವುದು.

* ರಸ್ತೆಯ ಇಕ್ಕೆಲಗಳಲ್ಲಿ ಎರಡು ಕೋಟಿಯಷ್ಟು ಸಸಿಗಳನ್ನು ನೆಡಲಾಗುವುದು.

* ತರಬೇತಿ ಹೊಂದಿದೆ ಸಾವಿರಾರು ಸಿವಿಲ್ ಇಂಜಿನಿಯರ್‌ಗಳು ಹಾಗೂ ದಿನಗೂಲಿ ನೌಕರರಿಗೆ ಉದ್ಯೋಗ ಸೃಷ್ಟಿಸಿರುವ ಹೆದ್ದಾರಿ ಯೋಜನೆಯಿಂದ 50 ಲಕ್ಷದಷ್ಟು ಮಾನವಗಂಟೆಗಳ ಶ್ರಮದ ಅಗತ್ಯ ಸೃಷ್ಟಿಯಾಗಿದೆ.

* ರಸ್ತೆ ನಿರ್ಮಾಣಕ್ಕಾಗಿ ಹೆದ್ದಾರಿ ಹಾದು ಹೋಗುವ ಎಲ್ಲಾ ರಾಜ್ಯಗಳಲ್ಲೂ ಒಟ್ಟಾರೆ 15,000 ಹೆಕ್ಟೇರ್‌ ಭೂಮಿ ಸ್ವಾಧೀನಕ್ಕೆ ಪಡೆಯಲಾಗಿದೆ.

* 1,380 ಕಿಮೀ ಉದ್ದದ ಈ ಹೆದ್ದಾರಿಯ 1,200 ಕಿ.ಮೀ.ನಷ್ಟು ನಿರ್ಮಾಣ ಕಾರ್ಯದ ಕಾಂಟ್ರಾಕ್ಟ್‌ಗಳನ್ನು ಅದಾಗಲೇ ಹಂಚಲಾಗಿದ್ದು ಕೆಲಸ ಪ್ರಗತಿಯಲ್ಲಿದೆ.

Edited By : Vijay Kumar
PublicNext

PublicNext

21/09/2021 03:33 pm

Cinque Terre

30.02 K

Cinque Terre

1