ಬೆಂಗಳೂರು: ಹಗಲಿನಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವೆ ಪ್ರಯಾಣಿಸುವ ರೈಲು ಪ್ರಯಾಣಿಕರು ಶೀಘ್ರದಲ್ಲೇ ಸುಂದರವಾದ ಘಾಟ್ ದೃಶ್ಯಾವಳಿಗಳನ್ನು ನೋಡಬಹುದಾಗಿದೆ.
ನೈರುತ್ಯ ರೈಲ್ವೆಗೆ ಗಾಜಿನ ಮೇಲ್ಛಾವಣಿ (ವಿಸ್ಟಾಡೋಮ್) ಎಸಿ ಹೊಂದಿರುವ ಒಂದು ರೈಲು ಬೋಗಿಯನ್ನು ನೀಡಲಾಗಿದೆ. ಇದನ್ನು ಬೆಂಗಳೂರು- ಮಂಗಳೂರು ನಡುವೆ ದಿನವೂ ಸಂಚರಿಸುವ ರೈಲಿನಲ್ಲಿ ಅಳವಡಿಸುವ ಚಿಂತನೆ ನಡೆದಿದೆ. ಕೋಚ್ ಇನ್ನೂ ಆಗಮಿಸದ ಕಾರಣ ಇದನ್ನು ಅಂತಿಮಗೊಳಿಸಲಾಗಿಲ್ಲ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯ ತಿಳಿಸಿದ್ದಾರೆ.
ಗಾಜಿನ ಮೇಲ್ಛಾವಣಿ ಇರುವ ರೈಲು ಬೋಗಿ ಸಂಪೂರ್ಣ ಹವಾನಿಯಂತ್ರಿವಾಗಿದೆ. ಎಲ್‌ಇಡಿ ದೀಪ, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಯನ್ನು ಈ ಬೋಗಿ ಹೊಂದಿದೆ. ದೇಶದ ಹಲವು ಪ್ರವಾಸಿತಾಣಗಳನ್ನು ಸಂಪರ್ಕಿಸುವ ರೈಲಿನಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ.
PublicNext
11/02/2021 05:31 pm