ನವದೆಹಲಿ: ಕೊರೊನಾ ರೂಪಾಂತರ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದ ವಿಮಾನಯಾನವನ್ನು ಜನವರಿ 6ರಿಂದ ಪುನರಾರಂಭಿಸುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಸಚಿವರು ನಿನ್ನೆಯಷ್ಟೇ ಜನವರಿ 8ರಿಂದ ಭಾರತ ಮತ್ತು ಬ್ರಿಟನ್ ನಡುವೆ ವಿಮಾನಯಾನ ಪುನರಾರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ ಎಂದು ಹೇಳಿದ್ದರು. ಆದರೆ ಇಂದು ಸ್ಪಷ್ಟೀಕರಣ ನೀಡಿದ ಅವರು, ಭಾರತದಿಂದ ಬ್ರಿಟನ್‌ಗೆ ಜನವರಿ 6ರಿಂದ ವಿಮಾನಗಳು ಹಾರಾಟ ನಡೆಸಬಹುದು. ಆದರೆ ಬ್ರಿಟನ್‌ನಿಂದ ಭಾರತಕ್ಕೆ ಬರುವ ವಿಮಾನಗಳ ಕಾರ್ಯಾಚರಣೆ ಜನವರಿ 8 ರಿಂದ ಪ್ರಾರಂಭವಾಗಲಿದೆ. ಈ ವೇಳಾಪಟ್ಟಿ ಜನವರಿ 23 ರವರೆಗೆ ಮಾನ್ಯವಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಅವಧಿಯಲ್ಲಿ ಉಭಯ ದೇಶಗಳ ನಡುವೆ ಪ್ರತಿ ವಾರ 30 ವಿಮಾನಗಳು ಕಾರ್ಯನಿರ್ವಹಿಸಲಿದ್ದು, ತಲಾ 15 ವಿಮಾನಗಳು ಭಾರತ ಮತ್ತು ಬ್ರಿಟನ್ ನಡುವೆ ವಾಹಕಗಳಾಗಿವೆ ಎಂದು ತಿಳಿಸಿದ್ದಾರೆ.
PublicNext
02/01/2021 05:24 pm