ಮಧುಬಿನ್: ಇದು ಯಾವುದೋ ಲೋಕಲ್ ರಸ್ತೆ ಅಲ್ಲ. ಬದಲಾಗಿ ಇದು ರಾಷ್ಟ್ರೀಯ ಹೆದ್ದಾರಿ. ಬಿಹಾರದ ಮಧುಬಿನ್ ಪಟ್ಟಣದ ನಡುವೆ ಇರುವ ಇದು 227ರ ರಾಷ್ಟ್ರೀಯ ಹೆದ್ದಾರಿ.
ಹೆದ್ದಾರಿಯ ಅವಸ್ಥೆ ನೋಡಿದ್ರೆ ಇಲ್ಲಿ ರಸ್ತೆ ಎಲ್ಲಿದೆ ಎಂಬುದನ್ನು ಹುಡುಕಾಡಬೇಕು. ಡಾಂಬರ್ ಅಂತೂ ಇಲ್ಲಿ ಮಾಯವಾಗಿದೆ. ಸಾಲು ಸಾಲು ತಗ್ಗುಗಳು ಥೇಟ್ ಮನೆ ಮುಂದಿನ ಈಜುಗೊಳದಂತೆ ಕಾಣುತ್ತಿದೆ. ಇನ್ನು ಇಲ್ಲಿ ಸಂಚರಿಸುವ ವಾಹನಗಳಂತೂ ಡಿಸ್ಕೋ ಡ್ಯಾನ್ಸ್ ಮಾಡುತ್ತಿವೆಯೇನೋ ಎಂಬಂತೆ ಕಾಣುತ್ತವೆ. ಹೆದ್ದಾರಿ ಪ್ರಾಧಿಕಾರದ ಈ ಮಟ್ಟಿಗಿನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
24/06/2022 02:17 pm