ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ರಷ್ಯಾ ಮಧ್ಯೆ ವಿಮಾಯಾನ ರದ್ದು

ನವದೆಹಲಿ : ಭಾರತದಿಂದ ರಷ್ಯಾಗೆ ಏರ್ ಇಂಡಿಯಾ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.ವಿಮಾನದ ವಿಮೆ ವಿಚಾರವಾಗಿ ಉಭಯ ರಾಷ್ಟ್ರಗಳ ರಾಜಧಾನಿಗಳ (ದೆಹಲಿ-ಮಾಸ್ಕೋ) ಮಧ್ಯೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಫೆ.24ರಿಂದ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದೆ. ಇದನ್ನು ಖಂಡಿಸಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಕ್ಕೆ ವಿಮಾನ ಹಾರಾಟವನ್ನು ನಿರ್ಬಂಧಿಸಿವೆ. ಇದೀಗ ದೆಹಲಿ ಮತ್ತು ಮಾಸ್ಕೋ ನಡುವಿನ ವಿಮಾನ ಹಾರಾಟ ಕೂಡ ರದ್ದಾಗಿದೆ.

ಇದಕ್ಕೆ ಕಾರಣ ವಿಮಾನಗಳಿಗೆ ವಿಮೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಮೂಲದ ಕಂಪನಿಗಳೇ ಒದಗಿಸುತ್ತಿವೆ. ಹೀಗಾಗಿ ಎರಡು ನಗರ ಮಧ್ಯೆ ಹಾರಾಟ ಮಾಡುವ ವಿಮೆ ಸಹ ಅನ್ವಯವಾಗಲ್ಲ ಎಂಬ ಭೀತಿಯಿಂದ ಹಾರಾಟ ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ.ದೆಹಲಿ ಮತ್ತು ಮಾಸ್ಕೋ ನಡುವೆ ವಾರದಲ್ಲಿ ಏರ್ ಇಂಡಿಯಾ ವಿಮಾನ ಸಂಚರಿಸುತ್ತಿತ್ತು. ಈಗ ಗುರುವಾರದಿಂದ ಈ ವಿಮಾನ ಹಾರಾಟ ರದ್ದಾಗಿದೆ.

Edited By : Nirmala Aralikatti
PublicNext

PublicNext

07/04/2022 07:06 pm

Cinque Terre

63.01 K

Cinque Terre

4

ಸಂಬಂಧಿತ ಸುದ್ದಿ