ಗದಗ : ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಅನ್ನದಾತರನ್ನ ಕಂಗಾಲು ಮಾಡಿದೆ. ಬಿತ್ತನೆ ಮಾಡಿದ್ದ ಹೆಸರು, ಮೆಕ್ಕೆಜೋಳ ನೆಲ ಕಚ್ಚಿವೆ. ಬೆಳೆಹಾನಿಯಿಂದ ಸಂಕಷ್ಟದಲ್ಲಿರುವಾಗಲೇ ರೈತರಿಗೆ ಸಾಲ ಮರುಪಾವತಿಗಾಗಿ ಬ್ಯಾಂಕ್‌ನಿಂದ ನೋಟಿಸ್ ಬಂದಿದ್ದು, ಅನ್ನದಾತರ ನಿದ್ದೆ ಕೆಡಿಸಿದೆ. ಹೌದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾಲ ಮರುಪಾವತಿ ನೋಟಿಸ್ ನೀಡಿದೆ. ಡೋಣಿ ಗ್ರಾಮದ ರೈತರು 2010ರಿಂದ ಪಿಎಲ್ ಬ್ಯಾಂಕ್‌ನಿಂದ ಒಟ್ಟು 20 ರೈತರು ಬೆಳೆ ಸಾಲ ಪಡೆದಿದ್ರು. 2016 ರಿಂದ ಸರಿಯಾಗಿ ಹಣ ಮರುಪಾವತಿ ಮಾಡಿರಲಿಲ್ವಂತೆ.
ಅತಿವೃಷ್ಟಿ, ಅನಾವೃಷ್ಟಿಯಿಂದ ಹಣ ಮರುಪಾವತಿ ಸಾಧ್ಯವಾರಿಲಿಲ್ಲ. ಡೋಣಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿ ಸಂಭವಿಸ್ತಾನೆ ಬಂದಿದೆ.. ಈ ಬಾರಿ ಅತಿಯಾದ ಮಳೆಯಿಂದಾಗಿ ಗ್ರಾಮದಲ್ಲಿ ಹರಿಯುವ ಮೂರು ಹಳ್ಳಗಳು ತುಂಬಿ 500 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ.. ನೀರಿನ ಮಟ್ಟ ಇಳಿಯುವ ಲಕ್ಷಣ ಹಾಕ್ತಿಲ್ಲ. ಇಂಥದ್ರಲ್ಲಿ ಬ್ಯಾಂಕ್ ಸಿಬ್ಬಂದಿ ಅಂತಿಮ ನೋಟಿಸ್ ನೀಡಿ, ರೈತರ ಜೀವನದ ಜೊತೆ ಆಟವಾಡೋದಕ್ಕೆ ಮುಂದಾಗಿದೆ. ಇನ್ನೂ ಬ್ಯಾಂಕ್‌ನವರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.
ಇನ್ನು ರೈತರು ಬೆಳೆದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವಾಗಲೇ ಸಾಲ ಮರುಪಾವತಿಗಾಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡ್ತಿದಾರೆ ಅಂತಾ ಗ್ರಾಮದ ರೈತರು ಆರೋಪಿಸ್ತಿದಾರೆ. ಪೂರ್ಣ ಪ್ರಮಾಣದ ಹಣ ನೀಡ್ದಿದ್ರೆ, ಜಪ್ತಿ, ಹರಾಜು ಪ್ರಕ್ರಿಯೆ ನಡೆಸೋದಾಗಿ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಇದ್ರಿಂದ ರೈತರು ಭಯ ಭೀತರಾಗಿದ್ದಾರೆ. ಎಲ್ಲಿ ನಮ್ಮ ಮನೆ ಹೊಲಗಳು ಜಪ್ತಿಯಾಗುತ್ತವೆ ಅಂತಾ ಗೋಳಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಸರ್ಕಾರ ಈ ಬಗ್ಗೆ ಗಮನ ಹರಿಸಿ ನೋಟಿಸ್ ವಾಪಾಸ್ ನಡೆದು ರೈತರಿಗೆ ಕಾಲಾವಕಾಶ ಕೊಡುವಂತೆ ಮಾಡ್ಬೇಕಿದೆ.. ಈ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಿದೆ.
PublicNext
11/08/2022 10:16 pm