ಬೆಳಗಾವಿ: ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ರೈತರ ವಿರೋಧದ ನಡುವೆಯು ಮುಂದುವರಿಯುತ್ತಿದೆ. ರೈತರು ಎಷ್ಟೇ ಹೋರಾಟ ಮಾಡಿದರು ಡಿ.ಸಿ ಮನವೊಲಿಕೆ ಯತ್ನ ಮಾಡಿ ಪರಿಹಾರ ಧನ ನೀಡುವುದಾಗಿ ಹೇಳುತ್ತಿದ್ದಾರೆಯೇ ಹೊರತು ಕಾಮಗಾರಿ ನಿಲ್ಲಿಸುತ್ತಿಲ್ಲ ಅನ್ನುವುದು ರೈತರ ಅಳಲಾಗಿದೆ.
ಇಂದು ಹಲಗಾ ಗ್ರಾಮದ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ರೈತ ಮುಖಂಡರು ಪೊಲೀಸರ ಜೊತೆ ರೈತ ಮುಖಂಡ ರವಿ ಪಾಟೀಲ್ ನೇತೃತ್ವದಲ್ಲಿ ವಾಗ್ವಾದ ನಡೆಸಿ,ಗುತ್ತಿಗೆದಾರರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಪ್ರತಿ, ವರ್ಕ್ ಆರ್ಡರ್ ತೋರಿಸುವಂತೆ ರೈತರು ಆಗ್ರಹಿಸಿದ್ದಾರೆ.ನಂತರ ಎಸಿ ರವೀಂದ್ರ ಅವರು ಕೋರ್ಟ್ ಆದೇಶವನ್ನ ಓದಿ ಹೇಳಿದ್ದಾರೆ.
ಫಲವತ್ತಾದ ಜಮೀನಿನಲ್ಲಿ ಕಾಮಗಾರಿ ಮಾಡುತ್ತಿದ್ದೀರಿ ಹೊಟ್ಟೆಗೆ ಏನ್ ತಿಂತೀರಿ?2006ರಲ್ಲಿ ಬರಗಾಲ ಬಿದ್ದಾಗ ಇಲ್ಲಿ ಬೆಳೆದ ಅಕ್ಕಿಯನ್ನು ಎಲ್ಲೆಡೆ ಸರಬರಾಜು ಮಾಡಲಾಗಿದೆ ಜಮೀನಿನಲ್ಲಿ ಒಂದೇ ಒಂದು ಕಲ್ಲು ಇಲ್ಲದಂತ ಫಲವತ್ತಾದ ಜಮೀನು ಇದು, ಈ ಜಮೀನನ್ನು ಬಂಜರು ಭೂಮಿ ಅಂತಾ ತೋರಿಸಿ ಕಾಮಗಾರಿ ಮಾಡ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಷ್ಟೆಲ್ಲಾ ಆದರೂ ಪಟ್ಟು ಬಿಡದ ಜಿಲ್ಲಾಡಳಿತ ಬೈಪಾಸ್ ರಸ್ತೆ ಮಾಡಿಯೇ ತೀರುತ್ತೇವೆ ಎನ್ನುವಂತೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿ ಮುಂದುವರಿಸಿದೆ.
PublicNext
16/11/2021 02:04 pm