ಬೆಳಗಾವಿ: ಬೆಳಗಾವಿ ಜಿಲ್ಲೆ ಎಂದರೆ ಪ್ರಭಾವಿ ರಾಜಕಾರಣಿಗಳು ಇರುವ ಕೇಂದ್ರಾಡಳಿತ ಜಿಲ್ಲೆ, ಅದರಲ್ಲೂ ಅಥಣಿ ಎಂದರೆ ಸಾಕು, ಹಲವು ರಾಜಕೀಯ ನಾಯಕರು ಮುನ್ನೆಲೆಗೆ ಬರುತ್ತಾರೆ. ಇದರ ಜೊತೆ ಚಿಕ್ಕೋಡಿಯ ಶೈಕ್ಷಣಿಕ ಜಿಲ್ಲೆಯಲ್ಲಿ ತಾಲೂಕು ಕೇಂದ್ರ ಸ್ಥಾನದಲ್ಲೇ ಪ್ರೌಢ ಶಾಲೆ ಇಲ್ಲದ ಪರಿಣಾಮ ಬಡ ಮಕ್ಕಳು ಖಾಸಗಿ ಶಾಲೆಗೆ ಹೋಗುವಂತಾಗಿದ್ದು ಪೋಷಕರಿಗೆ ಇದು ಹೊರೆಯಾಗುತ್ತಿದೆ. ಈ ಬಗ್ಗೆ ಅಥಣಿ ಜನರು ರಾಜಕೀಯ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಥಣಿ ಪಟ್ಟಣದಲ್ಲಿ ಸರ್ಕಾರಿ ಹೈಸ್ಕೂಲ್ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಖಾಸಗಿ ಹೈಸ್ಕೂಲ್‌ಗಳನ್ನು ಅವಲಂಬಿಸಿದ್ದಾರೆ. ಅಕ್ಕ-ಪಕ್ಕದ ಹಳ್ಳಿಯ ಹಾಗೂ ಪಟ್ಟಣದ ಬಡ ಮಕ್ಕಳು ಪ್ರಾಥಮಿಕ ಶಾಲೆಯನ್ನು ಮುಗಿಸಿದ ಬಳಿಕ ಹೈಸ್ಕೂಲ್ ಶಿಕ್ಷಣಕ್ಕಾಗಿ ಪರದಾಡುವಂತಾಗಿದೆ. ಏಕೆಂದರೆ ಇಲ್ಲಿ ಸರ್ಕಾರಿ ಶಾಲೆಯಿಲ್ಲದೆ ಖಾಸಗಿ ಶಾಲೆಗಳಿದ್ದು ಅನಿವಾರ್ಯತೆಯಿಂದ ಖಾಸಗಿ ಶಾಲೆಗಳು ನಿಗದಿಪಡಿಸುವ ಶುಲ್ಕ ವಿಧಿಸಿ ಶಾಲೆಗೆ ಹೋಗಬೇಕಾಗಿದೆ.
ಈ ಬಗ್ಗೆ ಚಿಕ್ಕೋಡಿ ಉಪವಿಭಾಗದ ಶಿಕ್ಷಣಾಧಿಕಾರಿಗಳನ್ನ ಕೇಳಿದರೆ, ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಗ್ರಾಮೀಣ ಸೇರಿಂದಂತೆ ಪಟ್ಟಣ ಭಾಗದಲ್ಲೂ ಸರ್ಕಾರಿ ಪ್ರೌಢ ಶಾಲೆಗಳ ಬಗ್ಗೆ ಪೋಷಕರು ಹಾಗೂ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಅಲ್ಲದೇ ಪ್ರಮುಖವಾಗಿ ಅಥಣಿ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಪ್ರೌಢ ಶಾಲೆ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಲಾಗಿದ್ದು ಸರ್ಕಾರದ ಮೇಲೆ ಕೂಡ ಒತ್ತಡ ಹಾಕಲಾಗಿದ್ದು ಸರ್ಕಾರ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿ ಇದೆ ಅಂತ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ತಾಲೂಕು ಕೇಂದ್ರದಲ್ಲಿ ಒಂದು ಸರ್ಕಾರಿ ಹೈಸ್ಕೂಲ್ ಇಲ್ಲದೆ ವಿದ್ಯಾರ್ಥಿಗಳು ಜನಸಾಮಾನ್ಯರು ಸರ್ಕಾರ ಸವಲತ್ತುಗಳಿಂದ ವಂಚಿತವಾಗುತ್ತಿದ್ದಾರೆ. ಈ ಬಗ್ಗೆ ಜನಪ್ರನಿಧಿಗಳ ಗಮನಕ್ಕೆ ಇದ್ದರೂ ಯಾರೊಬ್ಬರು ಕೂಡ ತಲೆ ಕೆಡಸಿಕೊಳ್ಳದೇ ಇರುವುದು ದುರಂತವೇ ಸರಿ.
PublicNext
07/08/2022 11:03 am