ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಭಾರಿ ಮಳೆ- ಶಾಲೆಗೆ ನುಗ್ಗಿದ ನೀರು

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಮಕ್ಕಳು ನೀರಿನಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋಲಾರ ನಗರದ ಕುರುಬರಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳ ಪಠ್ಯಪುಸ್ತಕಗಳು ಎಲ್ಲವೂ ನೀರಿನಲ್ಲಿ ನೆನೆದು ಹೋಗಿದೆ. ಅಲ್ಲದೆ ಶಾಲೆಯ ಕಟ್ಟಡ ಹಳೆಯದಾಗಿರುವುದರಿಂದ ಶಾಲೆಯ ಮೇಲ್ಛಾವಣಿ ಕೂಡ ಕುಸಿದು ಬೀಳುವ ಆತಂಕದಲ್ಲಿದೆ. ಶಿಕ್ಷಣ ಇಲಾಖೆಗೆ ಪೋಷಕರು ಹಾಗೂ ಮಕ್ಕಳು ಹಿಡಿ ಶಾಪ ಹಾಕ್ತಿದ್ದಾರೆ.

ವರದಿ: ರವಿ ಕುಮಾರ್, ಕೋಲಾರ.

Edited By :
PublicNext

PublicNext

03/08/2022 08:03 am

Cinque Terre

79.54 K

Cinque Terre

0