ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಪುರಸಭೆಯ ಆಸ್ತಿ ಹಾಳು ಮಾಡಿದ ಕಿಡಿಗೇಡಿಗಳು.!

ಅಥಣಿ : ಅಥಣಿ‌ ಪಟ್ಟಣದ ಮೀರಜ ರಸ್ತೆಗೆ ಹೊಂದಿಕೊಂಡಿರುವ ವಾಹನ ನಿಲ್ದಾಣದ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಅಥಣಿ ಪುರಸಭೆಯ ವತಿಯಿಂದ ಮೂರು‌ ಬೆಂಚ್‌ಗಳನ್ನು ಹಾಕಲಾಗಿತ್ತು, ಬೆಂಚ್‌ಗಳನ್ನು ಅಲ್ಲಿನ ಚಾಲಕರೇ ಪರಸ್ಪರ ಕಿತ್ತಾಡಿಕೊಂಡು‌ ಒಡೆದು ಹಾಕಿ, ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚಾಲಕರಿಗೆ ಅನುಕೂಲವಾಗಲಿ ಎಂದು ಹಾಕಿದ ಈ ಬೆಂಚುಗಳನ್ನು ಅಲ್ಲಿನ ಚಾಲಕರಲ್ಲಿನ ಕೆಲವರು ಈ ರೀತಿ ಒಡೆದು ಹಾಕಿರುವುದು ಯಾವ ನ್ಯಾಯ !, ಇದನ್ನ ಖಂಡಿಸಬೇಕಾದ ಚಾಲಕರುಗಳೇ ಘಟನೆ ಜರುಗಿ ಎರಡು ದಿನಗಳಾದರೂ ಕೂಡ ಸುಮ್ಮನಿರುವುದು ಆಶ್ಚರ್ಯವಾಗಿದೆ!.

ಯಾರೇ ಆಗಲಿ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವುದು ಅಪರಾಧ, ಹಾಳು ಮಾಡಿದವರಿಗೆ ಪುರಸಭೆಯವರು ತಕ್ಕ ಶಾಸ್ತಿ ಮಾಡಬೇಕು, ಸಾಧ್ಯವಾದರೆ ಅವರಿಂದಲೇ ಇದರ ಹಣವನ್ನು ವಸೂಲಿ ಮಾಡಬೇಕು ಇಲ್ಲವಾದರೆ ಅವರ ವಿರುದ್ದ ದೂರು ದಾಖಲಿಸಲಿ ಎಂದು ಅಥಣಿ ಬ್ಲಾಕ್ ಕಾಂಗ್ರೆಸ್ ಯೂಥ್ ಸಮೀತಿ ಅಧ್ಯಕ್ಷ ರವಿ ಬಡಕಂಬಿ ಅವರು ಆಗ್ರಹಿಸಿದ್ದಾರೆ.

Edited By : Nagesh Gaonkar
PublicNext

PublicNext

06/09/2022 03:58 pm

Cinque Terre

55.18 K

Cinque Terre

0

ಸಂಬಂಧಿತ ಸುದ್ದಿ